

ನವದೆಹಲಿ: ಅತಿ ಭದ್ರತೆಯಿರುವ ತಿಹಾರ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಒಬ್ಬ ಖೈದಿ ಓಡಿ ಹೋಗಿ ಮತ್ತೊಬ್ಬ ಖೈದಿ ಸಿಕ್ಕಿ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಆದೇಶಿಸಿದ್ದಾರೆ.
7ನೇ ನಂಬರ್ ಜೈಲಿನ ಗೋಡೆ ಬಳಿ ಸುರಂಗ ಕೊರೆದ ಫೈಜಾನ್ ಮತ್ತು ಜಾವೇದ್ 8ನೇ ನಂಬರ್ ಜೇಲಿನ ಗೋಡೆಗೆ ಬಂದು ಅಲ್ಲಿಂದ ಕಂಪೌಂಡ್ ಹಾರಲು ಯತ್ನಿಸಿದ್ದಾರೆ, ಈ ವೇಳೆ ಫೈಜಾನ್ ಪೊಲೀಸರಿಗೆ ಸಿಕ್ಕಿಬಿದ್ದು ಜಾವೇದ್ ಪರಾರಿಯಾಗಿದ್ದಾನೆ.
ಇನ್ನು ಅತಿ ಹೆಚ್ಚು ಭದ್ರತೆಯುಳ್ಳ ತಿಹಾರ ಜೈಲಿನಿಂದ ಖೈದಿಗಳು ಪರಾರಿಯಾದ ಹಿನ್ನೆಲೆಯಲ್ಲಿ ಜೈಲಿನ ಸೆಕ್ಯೂರಿಟಿ ಬಗ್ಗೆ ಪರಿಶೀಲನೆ ನಡೆಸುವಂತೆ ಜಂಗ್ ಸೂಚಿಸಿದ್ದಾರೆ.