ಲಲಿತ್ ಮೋದಿ ಪ್ರಕರಣ: ಮನ್ ಕಿ ಬಾತ್‍ನಲ್ಲಿ ಮೋದಿ ಮೌನಕ್ಕೆ ಟೀಕೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ವಿವಾದದ ಕುರಿತ ಪ್ರಧಾನಿ ನರೇಂದ್ರ ಮೋದಿ ``ಮನ್‍ಕಿ ಬಾತ್''ನಲ್ಲಿ ಮಾತನಾಡದೇ ಇರುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on: 

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ವಿವಾದದ ಕುರಿತ ಪ್ರಧಾನಿ ನರೇಂದ್ರ ಮೋದಿ ``ಮನ್‍ಕಿ ಬಾತ್''ನಲ್ಲಿ ಮಾತನಾಡದೇ ಇರುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ತಿಂಗಳಾಂತ್ಯದ ಭಾನುವಾರ ನಡೆಸಿಕೊಡುವ ``ಮನ್ ಕಿ ಬಾತ್'' ರೇಡಿಯೋ ಕಾರ್ಯಕ್ರಮವನ್ನು ಮೋದಿ ಈ ಬಾರಿ ಯೋಗದಿನದ ಯಶಸ್ಸು, ಮಳೆ ನೀರು ಕೊಯ್ಲು ಮತ್ತು ಬೇಟಿ ಬಚಾವೋ ಆಂದೋಲನಕ್ಕಷ್ಟೇ ಸೀಮಿತಗೊಳಿಸಿದ್ದಾರೆ.

ಲಲಿತ್ ಮೋದಿ ವಿವಾದದಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದಾರೆ. ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್, ಚಿದಂಬರಂ, ದಿಗ್ವಿಜಯ್ ಸಿಂಗ್, ಸಿಪಿಐ ನಾಯಕ ಡಿ. ರಾಜಾ, ಆಪ್ ಮುಖಂಡ ಆಶಿಷ್ ಖೇತಾನ್ ಅವರು ಮೋದಿ ಅವರು ಮೊದಲು ಲಲಿತ್ ಮೋದಿ ವಿಚಾರದ ಕುರಿತು ಮಾತನಾಡಲಿ. ಆ ಬಳಿಕ ಉಳಿದ ವಿಚಾರದ ಕುರಿತು ಪ್ರಸ್ತಾಪಿಸಲಿ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com