

ಚೆನ್ನೈ: ತಮಿಳುನಾಡಿನಲ್ಲಿ ಮೊದಲ ಮೆಟ್ರೋ ಟ್ರೈನ್ ಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚಾಲನೆ ನೀಡಿದ್ದು, ಯುವ ಮಹಿಳೆಯೊಬ್ಬರು ಮೆಟ್ರೋ ರೈಲು ಚಾಲನೆ ಮಾಡಿದ್ದಾರೆ.
ಮಧ್ಯಾಹ್ನ 12.15ರ ಸುಮಾರಿಗೆ ಅಳಂದೂರ್ ಮತ್ತು ಕೊಯಮ್ಬೆಡು ಮಧ್ಯ ಮೆಟ್ರೋ ರೈಲ್ ಸಂಚಾರ ಆರಂಭಿಸಿದ್ದು, ಸರ್ಕಾರಿ ಧರ್ಮಾಂಬಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಜಿನಿಯರಿಗ್ ಡಿಪ್ಲೋಮೊ ಪಡೆದಿರುವ 28 ವರ್ಷದ ಪ್ರೀತಿ ಎಂಬುವರು ಚಾಲನೆ ಮಾಡಿದ್ದಾರೆ.
ಮೆಟ್ರೋ ರೈಲಿನ ಚಾಲಕಿಯಾಗುವ ಆಸೆ ಹೊತ್ತಿದ್ದ ನನ್ನ ಮಗಳ ಕನಸು ಇಂದು ಸಾಕಾರಗೊಂಡಿತ್ತು. ನನಗೆ ತುಂಬಾ ಖುಷಿಯಾಗಿದೆ ಎಂದು ಪ್ರೀತಿ ತಂದೆ ಅನ್ಬು ಅವರು ಹೇಳಿದ್ದಾರೆ.