ಎಬಿಸಿಡಿ೨ ಚಿತ್ರದ ಹಿನ್ನಲೆ ನೃತ್ಯಕಾರ ನೀಲೇಶ್ ನಿರ್ಭವಾನೆ
ಎಬಿಸಿಡಿ೨ ಚಿತ್ರದ ಹಿನ್ನಲೆ ನೃತ್ಯಕಾರ ನೀಲೇಶ್ ನಿರ್ಭವಾನೆ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ: ಎಬಿಸಿಡಿ2 ಬ್ಯಾಕ್ ಅಪ್ ಡ್ಯಾನ್ಸರ್ ಬಂಧನ

ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಚಲನಚಿತ್ರ ಎಬಿಸಿಡಿ೨ ಚಿತ್ರದ ಹಿನ್ನಲೆ ನೃತ್ಯಕಾರ ನೀಲೇಶ್ ನಿರ್ಭವಾನೆ(೨೦)ಯನ್ನು, ಮಾನಸಿಕ ಅಸ್ವಸ್ಥ ಅಪ್ರಾಪ್ತೆಯನ್ನು ರೇಪ್ ಮಾಡಿದ

ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಚಲನಚಿತ್ರ ಎಬಿಸಿಡಿ೨ ಚಿತ್ರದ ಹಿನ್ನಲೆ ನೃತ್ಯಕಾರ ನೀಲೇಶ್ ನಿರ್ಭವಾನೆ(೨೦)ಯನ್ನು, ಮಾನಸಿಕ ಅಸ್ವಸ್ಥ ಅಪ್ರಾಪ್ತೆಯನ್ನು ರೇಪ್ ಮಾಡಿದ ಆರೋಪದ ಮೇಲೆ ಪಂತ್ ನಗರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ ನೀಲೇಶ್ ಮತ್ತು ಇತರ ಇನ್ನಿಬ್ಬರು ಆರೋಪಿಗಳು ೧೪ ವರ್ಷದ ಮಾನಸಿಕ ಅಸ್ವಸ್ಥ ಬಾಲಕಿಯನ್ನು ಸಾರ್ವಜನಿಕ ಶೌಚಾಲಯಕ್ಕೆ ಕೊಂಡೊಯ್ದು ರೇಪ್ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಬದಲಾದ ವರ್ತನೆಯಿಂದ ಕಳವಳಗೊಂಡು ಬಾಲಕಿಯ ಅಧ್ಯಾಪಕಿ ಪ್ರಶ್ನಿಸಿದಾಗ ಈ ಮೂವರು ಮೇ ತಿಂಗಳಿನಿಂದ ಅತ್ಯಾಚಾರವೆಸಗುತ್ತಿದ್ದರೆಂದು ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ.

"ಎರಡು ಮುರಿದ ಹಲ್ಲಿರುವ ನೀಲೇಶ್ ಗುರುತನ್ನು ಬಾಲಕಿ ವಿವರಿಸಿದಳು. ನಾವು ಅವನನ್ನು ಬಂಧಿಸಿದಾಗ ಅವನು ಈ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ" ಎಂದು ಡಿಸಿಪಿ ವಿನಯ್ ಕುಮಾರ್ ತಿಳಿಸಿದ್ದಾರೆ.

ನೀಲೇಶ್ ಪೊಲೀಸ್ ಬಂಧನದಲ್ಲಿದ್ದು ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com