ದೇಶ

ಡಾರ್ಜಿಲಿಂಗ್ ನಲ್ಲಿ ಭಾರಿ ಮಳೆಯಿಂದ ಭೂಕುಸಿತ: 20 ಸಾವು

ಭೀಕರ ಮಳೆಯಿಂದಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಭೂಕುಸಿತ ಉಂಟಾಗಿದ್ದು, 20 ಜನ ಸಾವನ್ನಪ್ಪಿದ್ದಾರೆ...

ಡಾರ್ಜಿಲಿಂಗ್ ನಲ್ಲಿ ಭಾರಿ ಮಳೆಯಿಂದ ಭೂಕುಸಿತ: 20 ಸಾವು
ಸಾಂದರ್ಭಿಕ ಚಿತ್ರ
Published On :

ಸಿಲಿಗುರಿ: ಭೀಕರ ಮಳೆಯಿಂದಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಭೂಕುಸಿತ ಉಂಟಾಗಿದ್ದು, 20 ಜನ ಸಾವನ್ನಪ್ಪಿದ್ದಾರೆ. ಮಿರಿಕ್ ಮತ್ತು ಕಲಿಂಪೊಂಗ್ ಎಂಬ ಪ್ರದೇಶದಲ್ಲಿ ಭೂಕುಸಿತವಾಗಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳಿಯ ಮಾಧ್ಯಮಗಳು ವರದಿ ಮಾಡಿದೆ.

ಮಹೇಂದ್ರ ಗೌನ್ ಎಂಬ ಪ್ರದೇಶದಲ್ಲಿ ಮೂವರು, ಮಿರಿಕ್ ನಲ್ಲಿ ಇಬ್ಬರು ಹಾಗೂ ಲಿಂಬು ಗೌನ್ ನಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಕೂಡ ಸಾವನ್ನಪ್ಪಿದ್ದಾನೆ ಎಂದು ವರದಿಗಳು ಹೇಳಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸಂತ್ರಸ್ತರ ರಕ್ಷಣೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಿಗೆ (ಎನ್ಎಚ್10 ಹಾಗೂ ಎನ್‌ಎಚ್55) ತೀವ್ರ ಹಾನಿಯಾಗಿದ್ದು, ಡಾರ್ಜಿಲಿಂಗ್‌ ಹಾಗೂ ಸಿಕ್ಕಿಂ ನಡುವಣ ರಸ್ತೆ ಸಂಪರ್ಕ ಹಾಗೂ ಸಂವಹನ ಸಂಪರ್ಕ ಕಡಿದು ಹೋಗಿದೆ. ಅಲ್ಲದೇ, ಡಾರ್ಜಿಲಿಂಗ್‌, ಕಲಿಂಪಾಂಗ್‌ ಹಾಗೂ ಕುರ್ಸೆಆಂಗ್ ಉಪವಿಭಾಗಗಳಲ್ಲಿ 25 ಭೂಕುಸಿತ ಘಟನೆಗಳು ವರದಿಯಾಗಿದ್ದು, ಕಲಿಂಪಾಂಗ್‌ನಲ್ಲಿ 8ನೇ ಹಾಗೂ 11ನೇ ಮೈಲಿ ಪ್ರದೇಶಗಳಲ್ಲಿ 15 ಜನರು ಕಾಣೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.