

ಕೈರೋ: ಇಸಿಸ್ ಉಗ್ರರ ದಾಳಿಯಿಂದ 60 ಸೈನಿಕರು ಸಾವನ್ನಪ್ಪಿರುವ ಘಟನೆ ಈಜಿಪ್ಟ್ ನ ಸಿನಾಯ್ ಪೆನಿನ್ಸುಲಾ ಪ್ರದೇಶದಲ್ಲಿ ನಡೆದಿದೆ.
ಸುಮಾರು 70 ಇಸಿಸ್ ಶಸ್ತ್ರ ಸಜ್ಜಿತ ಉಗ್ರರು ಮತ್ತು 3 ಆತ್ಮಾಹುತಿ ಬಾಂಬರ್ ಗಳು ಈಜಿಪ್ಟ್ ನ 5 ಸೇನಾ ಚೆಕ್ ಪಾಯಿಂಟ್ ಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ ಪರಿಣಾಮ 60 ಈಜಿಪ್ಟ್ ಸೈನಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ದಾಳಿ ನಡೆಸಿದ ಉಗ್ರರಿಗಾಗಿ ಶೋಧ ಆರಂಭವಾಗಿದ್ದು, ಇನ್ನು ಯೋಧರು ಹಾಗೂ ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ. ಇದೊಂದು ದೊಡ್ಡ ಮಟ್ಟದ ದಾಳಿಯಾಗಿದ್ದು , ಸೇನಾ ಚೆಕ್ ಪಾಯಿಂಟ್ ಗಳು ಹಾನಿಯಾಗಿವೆ ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಮೊಹಮದ್ ತಿಳಿಸಿದ್ದಾರೆ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.