ಹಕ್ಕುಚ್ಯುತಿ ಪ್ರತೀಕಾರಕ್ಕೆ ಕೈ ಹಚ್ಚಿದ ಪ್ರತಿಪಕ್ಷಗಳು

ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಮಾತಿನ ಚಾಟಿಯೇಟು ತಿಂದಿದ್ದ ಕಾಂಗ್ರೆಸ್ ಈಗ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಮಾತಿನ ಚಾಟಿಯೇಟು ತಿಂದಿದ್ದ ಕಾಂಗ್ರೆಸ್ ಈಗ ಪ್ರತೀಕಾರಕ್ಕೆ ಮುಂದಾಗಿದೆ. ಪಕ್ಷ ದ ವಿರುದ್ಧ  ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಪ್ರಧಾನಿ ವಿರುದ್ಧ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಗೆ ನಿರ್ಧರಿಸಿದೆ. ಕಳೆದ ವಾರವಷ್ಟೇ ಮೋದಿ ಭೂಸ್ವಾಧೀನ ವಿಧೇಯಕ, ಧರ್ಮ ಸಹಿಷ್ಣು ವಿಚಾರವಾಗಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದು ಕೊಂಡಿದ್ದರು. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲಿ ಮಂಗಳವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯ ನೆಪದಲ್ಲಿ ಮಾತಿ ನೇಟಿ ನಿಂದಲೇ `ಕೈ' ಮುಖಂಡರ ಬೆವರಿಳಿಸಿ ದ್ದರು. ಪ್ರತಿಪಕ್ಷಗಳ ಪ್ರತಿಯೊಂದು  ಆರೋಪ ಗಳಿಗೂ ನೇರಾನೇರಾ ಸ್ಪಷ್ಟನೆ ನೀಡಿದ್ದರು. ಎನ್‍ಡಿಎ ಸರ್ಕಾರ ಯುಪಿಎಯ ಯೋ ಜನೆ ಗಳನ್ನು ನಕಲು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ವಾಜಪೇಯಿ ಯೋಜನೆಗಳನ್ನು ಯುಪಿಎ ಸರ್ಕಾರ ಹೆಸರು ಬದಲಾಯಿಸಿ ಜಾರಿಗೊಳಿಸಿದೆ ಎಂದು ಪಟ್ಟಿಮಾಡಿ ವಿವರಿಸಿದ್ದರು. ಜತೆಗೆ, ಯುಪಿಎ ಅವಧಿಯಲ್ಲೇ ಕಪ್ಪುಹಣದ ತನಿಖೆಗೆ ಎಸ್‍ಐಟಿ ರಚಿಸಬಹುದಿತ್ತು. ಆದರೆ, ಕೆಲ ವ್ಯಕ್ತಿಗಳ ರಕ್ಷಣೆಗೆ ಸರ್ಕಾರ ಎಸ್‍ಐಟಿ ರಚನೆಯನ್ನು ಕೈಬಿಟ್ಟಿತ್ತು ಎಂದು ಟಾಂಗ್ ನೀಡಿದ್ದರು. ಮೋದಿ ಈ ತೀಕ್ಷ್ಣ  ಮಾತಿಗೆ ಅಪಮಾನಿತ ಕಾಂಗ್ರೆಸ್ ಹೇಗಾದರೂ ಮಾಡಿ ಈಗ ಮೋದಿಗೆ ಮುಖಭಂಗ ಉಂಟು ಮಾಡಲು ತಂತ್ರ ರೂಪಿಸಿದೆ.
ರಾಜ್ಯಸಭೆಯಲ್ಲಿ ಹೇಗೂ ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ಪ್ರಧಾನಿ ವಿರುದ್ಧ  ಹಕ್ಕುಚ್ಯುತಿ ಮಂಡಿಸಿ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com