ಕಳೆದ ವರ್ಷ 8 ವಿದೇಶ ಪ್ರವಾಸ ನಡೆಸಿದ ಪ್ರಧಾನಿ

2014, ಮಾರ್ಚ್ 26ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ, ಡಿಸೆಂಬರ್ 31ರೊಳಗೆ 24 ದಿನಗಳ ವಿದೇಶಿ ಪ್ರವಾಸ ನಡೆಸಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಚೆನ್ನೈ: 2014, ಮಾರ್ಚ್ 26ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ, ಡಿಸೆಂಬರ್ 31ರೊಳಗೆ 24 ದಿನಗಳ ವಿದೇಶಿ ಪ್ರವಾಸ ನಡೆಸಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ ವರ್ಷ ಸರಾಸರಿ ಪ್ರತಿ 9 ದಿನಕ್ಕೆ ಪ್ರಧಾನಿ ಮೋದಿ ವಿದೇಶ ಪ್ರವಾಸ ನಡೆಸಿದ್ದಾರೆ. ಮೋದಿ 2014ರಲ್ಲಿ ಒಟ್ಟು 8 ದೇಶಗಳಿಗೆ ಭೇಟಿ ನೀಡಿದ್ದಾರೆ. ಇವುಗಳಲ್ಲಿ ಅಮೆರಿಕಾಗೆ ಐದು ದಿನ, ಬ್ರೆಜಿಲ್‍ಗೆ ನಾಲ್ಕು ದಿನ, ಆಸ್ಟ್ರೇಲಿಯ, ನೇಪಾಳ ಹಾಗೂ ಜಪಾನ್‍ಗೆ ಮೂರು ದಿನ, ಮಯನ್ಮಾರ್‍ಗೆ ಎರಡು ದಿನ ಹಾಗೂ ಭೂತಾನ್, ಪಿsಜಿಗೆ ಒಂದು ದಿನದ ಪ್ರವಾಸ ನಡೆಸಿದ್ದಾರೆ.

ನೇಪಾಳವೊಂದಕ್ಕೆ ಮಾತ್ರ ಪ್ರಧಾನಿ ಮೋದಿ ಎರಡು ಬಾರಿ ಭೇಟಿ ನೀಡಿದ್ದಾರೆ. 2014, ಅಗಸ್ಟ್ 3ರಿಂದ 5ಕ್ಕೆ ರಾಜ್ಯ ಭೇಟಿ ನಡೆಸಿದ್ದು, 2014, ನವೆಂಬರ್ 25ರಿಂದ 27ಕ್ಕೆ ಸಾರ್ಕ್ ಸಮಿತಿಯಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com