ದೇಶ

ಹರಿಯಾಣದಲ್ಲಿ ಅಕಾಲಿಕ ಮಳೆ: 4 ರೈತರ ಸಾವು

ಹರಿಯಾಣದ ಅಮೃತಸರ, ಲುಧಿಯಾನ, ಪಟಿಯಾಲ, ರೋಪರ್, ಮೊಹಾಲಿ, ಪಗ್ವಾರಾ ಮತ್ತು ನವಾನ್ಶಹರ್ ಸೇರಿದಂತೆ ಹಲವು ಪ್ರದೇಶಗಲ್ಲಿ ಅಕಾಲಿಕ ಮಳೆ ಹಾಗೂ ಹಿಮಪಾತವಾಗಿದ್ದು, ಸುಮಾರು 4 ಲಕ್ಷ ಹೆಕ್ಟೇರ್...

ಹರಿಯಾಣದಲ್ಲಿ ಅಕಾಲಿಕ ಮಳೆ: 4 ರೈತರ ಸಾವು
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
Published On :

ಹರಿಯಾಣ: ಹರಿಯಾಣದ ಅಮೃತಸರ, ಲುಧಿಯಾನ, ಪಟಿಯಾಲ, ರೋಪರ್, ಮೊಹಾಲಿ, ಪಗ್ವಾರಾ ಮತ್ತು ನವಾನ್ಶಹರ್ ಸೇರಿದಂತೆ ಹಲವು ಪ್ರದೇಶಗಲ್ಲಿ ಅಕಾಲಿಕ ಮಳೆ ಹಾಗೂ ಹಿಮಪಾತವಾಗಿದ್ದು, ಸುಮಾರು 4 ಲಕ್ಷ ಹೆಕ್ಟೆರ್ ಗೂ ಅಧಿಕ ಪ್ರಮಾಣದ ಬೆಳೆನಾಶವಾಗಿದೆ ಎಂದು ತಿಳಿದು ಬಂದಿದೆ.

ಅಕಾಲಿಕ ಮಳೆಯಿಂದಾಗಿ ರೈತರ ಲಕ್ಷಾಂತರ ರುಪಾಯಿ ಬೆಳೆಗಳು ನಾಶಗೊಂಡಿವೆ. ಕೃಷಿಯನ್ನೇ ಜೀವನದ ಮೂಲವಾಗಿಸಿಕೊಂಡಿದ್ದ ಸ್ಥಳೀಯ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಈಗಾಗಲೇ ನಾಲ್ವರು ರೈತರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂತ್ರಸ್ಥ ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿದ್ದು, ರೈತರಿಗೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ. ಕೂಡಲೇ ಸಮಯಕ್ಕೆ ಸರಿಯಾಗಿ ರೈತರಿಗೆ ಪರಿಹಾರ ಧನವನ್ನು ಸರ್ಕಾರ ನೀಡಬೇಕು. ಈ ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಅಕಾಲಿಕ ಮಳೆಯಿಂದ ರೈತರಿಗಾದ ನಷ್ಟಕ್ಕೆ ಈಗಾಲೇ ಕ್ರಮ ಕೈಗೊಂಡಿರುವ ಹರಿಯಾಣ ಸರ್ಕಾರ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು, ಬೆಳೆಹಾನಿ ಹಾಗೂ ರೈತರಿಗಾದ ನಷ್ಟ ಕುರಿತಂತೆ ಸ್ಥಳೀಯ ಅಧಿಕಾರಿಗಳು ಕೂಡಲೇ ಸರ್ವೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.