

ನವದೆಹಲಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ಅವರ ಕಂಪನಿಯೊಂದರಲ್ಲಿ ರು. 9 ಕೋಟಿ ಹೂಡಿಕೆ ಮಾಡಿದ ಕೊಲ್ಕತ್ತಾ ಕಂಪನಿಯ ಮಾಲೀಕ ಮನೋಜ್ ಜೈನ್, ಶಿಲ್ಪಾ ದಂಪತಿ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಈ ಆರೋಪ ನಿರಾಧಾರ, ಮನೋಜ್ ಜೈನ್ ಅವರು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಜೈನ್ ಅವರಿಗೆ ಮೋಸ ಆಗಿದ್ದರೆ ನನ್ನ ಮೇಲಿನ ಆರೋಪಕ್ಕೆ ಸಾಕ್ಷಿ ಒದಗಿಸಿ ಸಾಬೀತು ಪಡಿಸಲಿ ಎಂದು ಶಿಲ್ವಾ ಟ್ವಿಟರ್‌ನಲ್ಲಿ ಗುಡುಗಿದ್ದಾರೆ.
ಶಿಲ್ಪಾ ದಂಪತಿಗಳ ಮಾಲೀಕತ್ವದ ಎಸೆನ್‌ಶಿಯಲ್ ಸ್ಫೋರ್ಟ್ಸ್ ಆ್ಯಂಡ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ (ಇಎಸ್‌ಪಿಎಲ್) ನಲ್ಲಿ ಮನೋಜ್ ಜೈನ್ ಅವರ ಎಂಕೆ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಹೂಡಿಕೆ ಮಾಡಿತ್ತು. ಆದರೆ ಇದಾದನಂತರ ಇಎಸ್‌ಪಿಎಲ್ ಈ ವಿಚಾರದ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ. ಆದ್ದರಿಂದ ತಮಗೆ ಮೋಸವಾಗಿದೆ ಎಂದು ಎಂಕೆ ಮೀಡಿಯದ ಹೆಚ್ಚುವರಿ ನಿರ್ದೇಶಕ ದೇಬಶಿಶ್ ದೂರು ನೀಡಿದ್ದರು.
ಇಎಸ್‌ಪಿಎಲ್ ನಲ್ಲಿ ಹೂಡಿಕೆ ನಡೆಸಿದರೆ ಎರಡು ವರ್ಷಗಳಲ್ಲಿ ಆ ಹಣದ 10 ಪಟ್ಟು ಹಣ ಹೂಡಿಕೆದಾರರರಿಗೆ ಸಿಗುತ್ತೆ ಎಂದು ಶಿಲ್ಪಾ ದಂಪತಿ ಮತ್ತು ಇತರರು ನಂಬಿಸಿದ್ದರು. ಮಾತ್ರವಲ್ಲದೆ ಶಿಲ್ಪಾ ಅವರ ಕಂಪನಿಯ 20 ಲಕ್ಷ ಇಕ್ವಿಟಿ ಶೇರ್‌ನ್ನು ಎಂಕೆ ಕಂಪನಿಗೆ ಹಂಚಿಕೆ ಮಾಡಲಾಗಿತ್ತು.