ಪ್ರಥಮ ಅಂಧ ವಾರ್ತಾ ವಾಚಕ ಶ್ರೀರಾಮಾನುಜಂ

11 ವರ್ಷದ ಬಾಲಕ ಶ್ರೀರಾಮಾನುಜಂ, ದೇಶದ ಪ್ರಥಮ ಅಂಧ ವಾರ್ತಾ ನಿರೂಪಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ...
ಪ್ರಥಮ ಅಂಧ ವಾರ್ತಾ ವಾಚಕ ಶ್ರೀರಾಮಾನುಜಂ
ಪ್ರಥಮ ಅಂಧ ವಾರ್ತಾ ವಾಚಕ ಶ್ರೀರಾಮಾನುಜಂ
Updated on: 

ಕೊಯಮತ್ತೂರು: 11 ವರ್ಷದ ಬಾಲಕ ಶ್ರೀರಾಮಾನುಜಂ, ದೇಶದ ಪ್ರಥಮ ಅಂಧ ವಾರ್ತಾ ನಿರೂಪಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ತಮಿಳುನಾಡಿನ ಪಳನಿಯ ಈ ಹುಡುಗ ಲೋಟಸ್ ನ್ಯೂಸ್ ಚಾನೆಲ್ಲಿನಲ್ಲಿ 22 ನಿಮಿಷಗಳ ಕಾಲ ಬ್ರೈಲ್ ಲಿಪಿ ಬಳಸಿ ವಾರ್ತೆ ಓದಿ ದಾಖಲೆ ಮಾಡಿದ್ದಾನೆ.

ನೇಪಾಳ ಭೂಕಂಪ ಸಂಬಂಧ ಸುದ್ದಿ ಹಾಗೂ ಶ್ರೀಲಂಕಾದ ಮಹಿಂದ ರಾಜಪಕ್ಸೆ ವಿಚಾರಣೆಯ ಸುದ್ದಿ ಯನ್ನು ನೇರಪ್ರಸಾರದಲ್ಲಿ ಓದಿದ ಈ 5ನೇ ತರಗತಿ ವಿದ್ಯಾರ್ಥಿಯ ಈ ಸಾಧನೆಯನ್ನು ಆತನ ಪೋಷಕರು ಟಿವಿಯಲ್ಲಿ ನೋಡಿ ಆನಂದಭಾಷ್ಪ ಸುರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com