

ದಂತೆವಾಡ: ಹಿಂಸಾಚಾರ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಛತ್ತೀಸ್‌ಗಢದಲ್ಲೂ ನಕ್ಸಲ್ ಸಮಸ್ಯೆ ಕಡಿಯಾಗಲಿದೆ ಎಂದು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಂತೆವಾಡದ ಅಲ್ಟ್ರಾ ಮೆಗಾ ಉಕ್ಕು ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಇಲ್ಲಿಗೆ ಭೇಟಿ ನೀಡಿರುವ ನನ್ನ ಭಾಗ್ಯ. ಬಸ್ತಾರ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಗೆ ಚಾಲನೆ ದೊರೆಯುತ್ತಿದೆ. ಕೇವಲ ಒಂದ ಗಂಟೆಯೊಳಗೆ 24 ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆಗೆ ಸಹಿ ಹಾಕಲಾಗಿದೆ ಎಂದರು.
ಹಿಂಸಾಚಾರಕ್ಕೆ ಯಾವುದೇ ಭವಿಷ್ಯವಿಲ್ಲ, ಭವಿಷ್ಯ ಇರುವುದು ಶಾಂತಿಯಲ್ಲಿ. ಹೆಗಲ ಮೇಲೆ ಬಂದೂಕಿನ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ನಕ್ಸಲರಿಗೆ ಪ್ರಧಾನಿ ಸಲಹೆಯ ಸಂದೇಶವನ್ನು ರವಾನಿಸಿದರು.
ನಕ್ಸಲರು ಮಕ್ಕಳಿಗೆ ಬಂದೂಕು ಕೊಡುತ್ತಿದ್ದರು, ಆದರೆ ಸರ್ಕಾರ ಅವರ ಕೈಗಳಿಗೆ ಪೆನ್ ನೀಡಿದೆ. ಆ ನಿಟ್ಟಿನಲ್ಲಿ ಛತ್ತೀಸ್ ಗಢದಲ್ಲೂ ನಕ್ಸಲ್ ಸಮಸ್ಯೆ ಕಡಿಮೆಯಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.