ಮ್ಯಾನ್ಮಾರ್ ಸಂಸತ್ತಿನಲ್ಲಿ ಪತ್ರಕರ್ತರಿಗೆ ನಿಷೇಧ

ನಿದ್ದೆ ಮಾಡುತ್ತಿದ್ದ ಸಂಸದರ ಫೋಟೋ ತೆಗೆದು ಆನ್ ಲೈನ್ ನಲ್ಲಿ ಪ್ರಕಟಿಸಿದ್ದಕ್ಕಾಗಿ ಮ್ಯಾನ್ಮಾರ್ ಸಂಸತ್ತಿನಲ್ಲಿ ಪತ್ರಕರ್ತರಿಗೆ ಪ್ರವೇಶ ಗುರುವಾರ ನಿಷೇಧ ಹೇರಲಾಗಿದೆ...
ಮ್ಯಾನ್ಮಾರ್ ನ ಸಂಸತ್ತಿನ ಅಧಿವೇಶನದಲ್ಲಿ ನಿದ್ರೆಗೆ ಜಾರಿದ ಸಂಸದರ ಚಿತ್ರ
ಮ್ಯಾನ್ಮಾರ್ ನ ಸಂಸತ್ತಿನ ಅಧಿವೇಶನದಲ್ಲಿ ನಿದ್ರೆಗೆ ಜಾರಿದ ಸಂಸದರ ಚಿತ್ರ
Updated on: 

ಯಂಗೂನ್: ನಿದ್ದೆ ಮಾಡುತ್ತಿದ್ದ ಸಂಸದರ ಫೋಟೋ ತೆಗೆದು ಆನ್ ಲೈನ್ ನಲ್ಲಿ ಪ್ರಕಟಿಸಿದ್ದಕ್ಕಾಗಿ ಮ್ಯಾನ್ಮಾರ್ ಸಂಸತ್ತಿನಲ್ಲಿ ಪತ್ರಕರ್ತರಿಗೆ ಪ್ರವೇಶ ಗುರುವಾರ ನಿಷೇಧ ಹೇರಲಾಗಿದೆ.

ಮ್ಯಾನ್ಮಾರ್ ನ ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದ ಸಮಯದಲ್ಲಿ ಸಂಸದರು ನಿದ್ರಾಲೋಕಕ್ಕೆ ಜಾರಿರುವ ಫೋಟೋಗಳನ್ನು ತೆಗೆದು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಇದರಿಂದಾಗಿ ಪತ್ರಕರ್ತರು ಮತ್ತು ಸಂಸತ್ ಭವನದ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.

ಇದರ ಪರಿಣಾಮ ಮುದ್ರಣ ಮಾಧ್ಯಮದ ಪತ್ರಕರ್ತರಿಗೆ ಗ್ಯಾಲರಿಯಲ್ಲಿ ಕೊನೆಯ ಸಾಲಿನಲ್ಲಿ ಕುಳಿತು ವರದಿ ಮಾಡಲು ಅನುಮತಿ ನೀಡಲಾಗಿದ್ದು, ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರಿಗೆ ಸಂಸತ್ತಿನಲ್ಲಿ ನಿಷೇಧ ಹೇರಲಾಗಿದೆ. ವಿದ್ಯುನ್ಮಾನ ಮಾಧ್ಯಮಗಳು ಇನ್ನು ಮುಂದೆ ಹೊರಗಿನಿಂದ ಕುಳಿತಷ್ಟೇ ಅಧಿಕೃತ ದೂರದರ್ಶನ ವಾಹಿನಿಯ ಮೂಲಕ ಪ್ರಸಾರವಾಗುವ ಸಂಸತ್ತಿನ ಕಲಾಪಗಳನ್ನು ವೀಕ್ಷಿಸಲು ಅನುಮತಿ ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com