

ದಮಾಂ: ಸೌದಿ ಅರೇಬಿಯಾದ ದಮಾಮ್‌ನಲ್ಲಿರುವ ಶಿಯಾ ಮಸೀದಿ ಬಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಇಲ್ಲಿನ ಇಮಾಂ ಹುಸೇನ್ ಮಸೀದಿ ಸಮೀಪವಿರುವ ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿದೆ . ಕಾರಿನಲ್ಲಿರಿಸಿದ ಬಾಂಬ್ ಸ್ಫೋಟ ಗೊಂಡಿದ್ದು, ಪ್ರಾರ್ಥನೆ ಮುಗಿಸಿ ಬರುವ ಹೊತ್ತಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ.
ಹೆಚ್ಚಿನ ಮಾಹಿತಿಗಳು ಸದ್ಯ ಲಭ್ಯವಾಗಿಲ್ಲ .
ಒಂದು ವಾರದ ಹಿಂದೆಯಷ್ಟೇ ಸೌದಿ ಶಿಯಾ ಮಸೀದಿ ಬಳಿ ನಡೆಸ ಸ್ಫೋಟದಲ್ಲಿ 21 ಜನರು ಸಾವನ್ನಪ್ಪಿದ್ದು, 66 ಮಂದಿಗೆ ಗಾಯಗಳಾಗಿತ್ತು.