1ರಿಂದ 12ನೇ ತರಗತಿವರೆಗೂ ಬರುತ್ತೆ ಆ್ಯಪ್ ಬುಕ್

ಇನ್ನು ಮುಂದೆ ಎನ್‍ಸಿಇಆರ್‍ಟಿ ಪಠ್ಯ ಪುಸ್ತಕಗಳು ಮೊಬೈಲ್ ಆ್ಯಪ್‍ನಲ್ಲಿ ಲಭ್ಯ. ಜೂನ್ ಮೊದಲ ವಾರದಲ್ಲೇ ದೇಶಾದ್ಯಂತ ಪಠ್ಯ ಉಚಿತವಾಗಿ ಮೊಬೈಲ್ ಆ್ಯಪ್ ಮೂಲಕ ಸಿಗಲಿದ್ದು, ಡೌನ್‍ಲೋಡ್ ಮಾಡಿಕೊಂಡರೆ ಸಾಕು...
1ರಿಂದ 12ನೇ ತರಗತಿವರೆಗೂ ಬರುತ್ತೆ ಆ್ಯಪ್ ಬುಕ್ (ಸಾಂದರ್ಭಿಕ ಚಿತ್ರ)
1ರಿಂದ 12ನೇ ತರಗತಿವರೆಗೂ ಬರುತ್ತೆ ಆ್ಯಪ್ ಬುಕ್ (ಸಾಂದರ್ಭಿಕ ಚಿತ್ರ)
Updated on: 

ನವದೆಹಲಿ: ಇನ್ನು ಮುಂದೆ ಎನ್‍ಸಿಇಆರ್‍ಟಿ ಪಠ್ಯ ಪುಸ್ತಕಗಳು ಮೊಬೈಲ್ ಆ್ಯಪ್‍ನಲ್ಲಿ ಲಭ್ಯ. ಜೂನ್ ಮೊದಲ ವಾರದಲ್ಲೇ ದೇಶಾದ್ಯಂತ ಪಠ್ಯ ಉಚಿತವಾಗಿ ಮೊಬೈಲ್ ಆ್ಯಪ್ ಮೂಲಕ ಸಿಗಲಿದ್ದು, ಡೌನ್‍ಲೋಡ್ ಮಾಡಿಕೊಂಡರೆ ಸಾಕು.

ಇಂಥ ಹೊಸ ವ್ಯವಸ್ಥೆ ಜಾರಿಗೆ ತರಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ ಮುಂದಾಗಿದ್ದಾರೆ ಎಂದು ಮೇಲ್ ಟುಡೆ ವರದಿ ಮಾಡಿದೆ. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಗುಣಮಟ್ಟ ಹೆಚ್ಚಿಸಲು ಎಲ್ಲ ಎನ್‍ಸಿಇಆರ್‍ಟಿ (ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ) ಅಡಿ ಪಠ್ಯಗಳನ್ನು ಆ್ಯಪ್‍ಗಳ ಮೂಲಕ ಉಚಿತವಾಗಿ ನೀಡಲು ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದ್ದು, ಆ್ಯಂಡ್ರಾಯ್ಡ್ ಹೊಂದಿರು ಸ್ಮಾರ್ಟ್ ಫೋನ್ ಇದ್ದರೆ ಸಾಕು.

ಎನ್ ಸಿಇಆರ್‍ಟಿ ಈ ಆ್ಯಪ್ ಅಬಿsವೃದಿಟಛಿಪಡಿಸಿದ್ದು, 1ರಿಂದ 12ನೇ ತರಗತಿವರೆಗಿನ ಪಠ್ಯ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪಠ್ಯ ದೊರೆಯಲಿದೆ. ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡ ಬಳಿಕ ಅದರಲ್ಲಿ ಭಾಷೆ, ತರಗತಿ, ವಿಷಯ, ಅಧ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಹೀಗಾಗಿ ಈ ಪಠ್ಯವು ವಿದ್ಯಾರ್ಥಿಗಳು, ಶಿಕ್ಷಕರು ಜತೆಗೆ ಪೋಷಕರಿಗೂ ಉಚಿತವಾಗಿ ಸಿಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com