

ಮುಂಬೈ: ಕೇವಲ ಒಂದು ವರ್ಷದ ನರೇಂದ್ರ ಮೋದಿ ಸರ್ಕಾರದ ಸಾಧನೆಬಗ್ಗೆ ಏನೂ ಹೇಳಲಾಗದು. ಹೀಗೆಂದು ಬಾಲಿವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ಅಭಿಪ್ರಾಯಪಟ್ಟಿದ್ದಾರೆ. ಸಿಎನ್ ಎನ್-ಐಬಿಎನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ``5 ವರ್ಷಗಳ ಕಾಲ ಅವರ ನೇತೃತ್ವದ ಸರ್ಕಾರಕ್ಕೆ ಮತ ಹಾಕಿದ್ದಾರೆ. ಅವಧಿ ಪೂರ್ತಿಯಾಗುವವರೆಗೆ ಅವಕಾಶ ನೀಡಬೇಕು. ನಂತರ ಚುನಾವಣೆಯಲ್ಲಿ ಜನ ಮತದಾನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಲಿ. ಸರ್ಕಾರದ ಕೆಲಸ ಖುಷಿಯಾಗಿದ್ದರೆ ಮತ್ತೊಮ್ಮೆ ಆಯ್ಕೆ ಮಾಡಲಿ. ಇಲ್ಲದಿದ್ದರೆ ತಿರಸ್ಕರಿಸಲಿ'' ಎಂದಿದ್ದಾರೆ.
ಒಳ್ಳೆಯದಾಗಲಿ : ರಾಹುಲ್ ಗಾಂಧಿಯವರ 2 ತಿಂಗಳ ರಜೆ ಬಳಿಕದ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಚ್ಚನ್ ಒಬ್ಬೊಬ್ಬ ವ್ಯಕ್ತಿಯದು ಒಂದೊಂದು ಶೈಲಿ. ರಾಹುಲ್ ಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳಿದರು. ಗಾಂಧಿ ಕುಟುಂ ಬದ ಜತೆಗಿನ ತಮ್ಮ ಒಡನಾಟ ರಾಷ್ಟ್ರೀಯ ವಿಚಾರವಾಗಬೇಕಾಗಿಲ್ಲ. ತಮ್ಮ ತಂದೆಯವರ ಕಾಲದಿಂದಲೂ ನೆಹರೂ-ಗಾಂಧಿ
ಕುಟುಂಬದ ಜತೆಗೆ ಉತ್ತಮ ಸಂಬಂಧವಿತ್ತು. ಅದನ್ನು ಗೌರವಿಸುವುದಾಗಿ ಬಿಗ್
ಬಿ ಹೇಳಿದ್ದಾರೆ.