ತಾಯಿ ಸಾವಿನಿಂದ ನೊಂದ ಮಗ ಆತ್ಮಹತ್ಯೆ!

ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದರಿಂದ ಖಿನ್ನತೆಗೆ ಒಳಗಾದ ಟೆಕ್ಕಿಯೊಬ್ಬರು ಅಪಾರ್ಟ್‍ಮೆಂಟ್‍ವೊಂದರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದರಿಂದ ಖಿನ್ನತೆಗೆ ಒಳಗಾದ ಟೆಕ್ಕಿಯೊಬ್ಬರು ಅಪಾರ್ಟ್‍ಮೆಂಟ್‍ವೊಂದರ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿಯಲ್ಲಿ ನಡೆದಿದೆ. 
ತಿಪ್ಪಸಂದ್ರ ನಿವಾಸಿ ವಿನೀತ್ ಪೂರ್ಣಚಂದ್ರ (24) ಮೃತರು. ಶುಕ್ರವಾರ ನಸುಕಿನಲ್ಲಿ ಕಾಡುಗೋಡಿಯ ಆರ್ಮಿ ವೆಲ್ಫೇರ್ ಅಸೋಸಿಯೇಷನ್ ಅಪಾರ್ಟ್‍ಮೆಂಟ್‍ನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿನೀತ್‍ನ ತಾಯಿ ಮೀರಾ, ಗುರುವಾರ ರಾತ್ರಿ 10 ಗಂಟೆಗೆ ನಿಧನರಾಗಿದ್ದರು. ಇದರಿಂದ ತೀವ್ರವಾಗಿ ಮನನೊಂದಿದ್ದ ವಿನೀತ್ ಬೇಸರಗೊಂಡಿದ್ದ. ಅಲ್ಲದೆ, ಈ ವಿಷಯವನ್ನು ಕುಟುಂಬ ಸದಸ್ಯರು, ಸ್ನೇಹಿತರು, ಸಂಬಂಧಿಗಳಿಗೂ ತಿಳಿಸಿದ್ದ. ತಾಯಿ ಅಂತ್ಯಕ್ರಿಯೆ ನಡೆಸಲು ಸಂಬಂಧಿಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. 
ಆಗ ತೀವ್ರ ಮನನೊಂದಿದ್ದ ವಿನೀತ್ ತನ್ನ ಸ್ನೇಹಿತ ವಾಸವಿದ್ದ ಅಪಾರ್ಟ್‍ಮೆಂಟ್‍ಗೆ ತೆರಳಿ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ದು ಕೇಳಿದ ಸೆಕ್ಯುರಿಟಿ ಗಾರ್ಡ್ ಸ್ಥಳಕ್ಕಾಗಮಿಸಿದಾಗ ವಿನೀತ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ವಿನೀತ್ ತಂದೆ ನಿಧನರಾಗಿದ್ದರು.
ಅನಾರೋಗ್ಯದಿಂದ ತಾಯಿಯು ನಿಧನರಾದ ಕಾರಣ ತೀವ್ರ ಬೇಸರಗೊಂಡಿದ್ದ ವಿನೀತ್ ನನಗೆ ಯಾರೂ ಇಲ್ಲ. ತಾನು ಕೂಡ ಸಾಯಬೇಕು ಎನಿಸುತ್ತಿದೆ ಎಂದು ನೆಂಟರ ಬಳಿ ಹೇಳಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com