ಜಮ್ಮು-ಕಾಶ್ಮೀರಕ್ಕೆ 80 ಸಾವಿರ ಕೋಟಿ ಅನುದಾನ ಘೋಷಿಸಿದ ಪ್ರಧಾನಿ

ಜಮ್ಮು- ಕಾಶ್ಮೀರದ ಯುವ ಜನತೆಗೆ ಉದ್ಯೋಗವಕಾಶ ಹಾಗೂ ರಾಜ್ಯದ ಅಭಿವೃದ್ಧಿಗಾಗಿ 80,000 ಕೋಟಿ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ಶ್ರೀನಗರ್: ಜಮ್ಮು- ಕಾಶ್ಮೀರದ ಯುವ ಜನತೆಗೆ ಉದ್ಯೋಗವಕಾಶ ಹಾಗೂ ರಾಜ್ಯದ ಅಭಿವೃದ್ಧಿಗಾಗಿ 80,000 ಕೋಟಿ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.

ನರೇಂದ್ರ ಮೋದಿ ಅವರು ಕಾಶ್ಮೀರದಲ್ಲಿ ವಿವಿಧ ಮೂಲಭೂತ ಸೌಲಭ್ಯ ಯೋಜನೆ ಹಾಗೂ ಬಗ್ಲಿಹಾರ್ ಪವರ್ ಪ್ರಾಜೆಕ್ಟ್ ಗೆ ಚಾಲನೆ ನೀಡಿದರು. ನಂತರ ಶ್ರೀನಗರದ ಶೇರೆ ಕಾಶ್ಮೀರ್ ಸ್ಟೇಡಿಯಂನಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯ ಖಜಾನೆ ನಿಮಗೆ ನೀಡುತ್ತಿದ್ದೇನೆ. ದೆಹಲಿಯ ಖಜಾನೆ ಮಾತ್ರವಲ್ಲ, ಈ ದಿಲ್(ಹೃದಯ) ಕೂಡ ನಿಮಗೆ ಅರ್ಪಿಸುತ್ತಿದ್ದೇನೆ” ಎಂದು ಮೋದಿ ಕಾರ್ಯಕರ್ತರ ಮುಂದೆ ಬಾವುಕರಾದರು.

ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಮೂಲ ಮಂತ್ರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಆಗಿದ್ದು, ದೇಶದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಬಾರದು. ಜಮ್ಮು-ಕಾಶ್ಮೀರ ಕೂಡ ಪ್ರಗತಿಯನ್ನು ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮೋದಿ ಅಭಿಪ್ರಾಯಪಟ್ಟರು.

ಫರ್ವೇಜ್ ರಸೂಲ್ ರಂತ ಪ್ರತಿಭಾವಂತರಿಗಾಗಿ ಏನನ್ನ ಬೇಕಾದರೂ ಮಾಡಲು ಸಿದ್ಧ. ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಧೋನಿ, ಸೆಹ್ವಾಗ್ ಯಾರೇ ಸಿಕ್ಸರ್ ಬಾರಿಸಲಿ, ಆ ಸಿಕ್ಸರ್ ಭಾರಿಸುವ ಬ್ಯಾಟ್ ಕಾಶ್ಮೀರದ ಮರಗಳಿಂದ ತಯಾರಿಸಲ್ಪಡುತ್ತದೆ ಎಂದು ಮೋದಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com