ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ಹೀರೋ ಆಗಿ ಮಿಂಚಿದರೆ, ಪ್ರಚಾರ ಕಾರ್ಯದಲ್ಲಿ 37ರ ಹರೆಯದ ಪ್ರಶಾಂತ್ ಕಿಶೋರ್ ಹೀರೋ ಆಗಿದ್ದಾರೆ. ಈ ಬಾರಿ ನಿತೀಶ್ ಗಾಗಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಪ್ರಶಾಂತ್ ಕಿಶೋರ್ ಅವರ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (ಐಪಿಸಿ) ಆಗಿತ್ತು. ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೂ 2012 ಗುಜರಾತ್ ಚುನಾವಣೆಯಲ್ಲಿ ಪ್ರಚಾರ ಕಾರ್ಯಗಳನ್ನು ನಡೆಸಿದ್ದು ಪ್ರಶಾಂತ್ ಅವರ ಇದೇ ಸಮಿತಿ ಆಗಿತ್ತು.