

ಪಾಟ್ನ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಗೆಲವು ಕುರಿತಂತೆ ವಿಶ್ವಾಸ ವ್ಯಕ್ತಪಡಿಸಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು, ಮಹಾಮೈತ್ರಿ ಕೂಟ ಗೆಲವು ಸಾಧಿಸಲಿದೆ ಎಂದು ಭಾನುವಾರ ಹೇಳಿದ್ದಾರೆ.
ಬಿಹಾರು ಚುನಾವಣಾ ಮತದಾನ ಎಣಿಕೆ ಆರಂಭವಾಗುವುದಕ್ಕೂ ಮುನ್ನವೇ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ರಾತ್ರಿ ಬಹಳ ಚೆನ್ನಾಗಿ ನಿದ್ರೆ ಮಾಡಿದ್ದೇನೆ. ಮಹಾಮೈತ್ರಿ ಕೂಟ ಗೆಲವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲಾ ಪ್ರಶ್ನೆಗಳಿಗೂ ಸಂಜೆ ಉತ್ತರಿಸುವುದಾಗಿ ಹೇಳಿದ್ದಾರೆ.
ಮಹಾಮೈತ್ರಿ ಕೂಟವು 243 ಸೀಟುಗಳಲ್ಲಿ 190 ಸ್ಥಾನಗಳಲ್ಲಿ ಗೆಲವು ದಾಖಲಿಸಿದೆ. ಮುಖ್ಯಮಂತ್ರಿಯಾಗಿ ನಮ್ಮ ಆಯ್ಕೆ ಎಂದಿಗೂ ನಿತೀಶ್ ಕುಮಾರ್ ಅವರೆ. ಆರ್ ಜೆಡಿ ಪಕ್ಷ ಹೆಚ್ಚು ಸ್ಥಾನ ಗಳಿಸಿದ್ದರೂ ಸಹ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ.