ಶತೃಘ್ನ ಸಿನ್ಹಾರನ್ನು ನಾಯಿಗೆ ಹೋಲಿಸಿದ ಕೈಲಾಶ್ ವಿಜಯವರ್ಗಿಯ

ಬಿಜೆಪಿ ಮತ್ತೊಬ್ಬ ಸಂಸದ ಕೈಲಾಶ್ ವಿಜಯ ವರ್ಗೀಯ ಶತೃಘ್ನ ಸಿನ್ಹಾ ಅವರನ್ನು ನಾಯಿಗೆ ಹೋಲಿಕೆ ಮಾಡಿದ್ದಾರೆ.
ವಿಜಯ ವರ್ಗೀಯ ಮತ್ತು ಶತೃಘ್ನ ಸಿನ್ಹಾ
ವಿಜಯ ವರ್ಗೀಯ ಮತ್ತು ಶತೃಘ್ನ ಸಿನ್ಹಾ
Updated on

ನವದೆಹಲಿ: ಬಿಹಾರ ವಿಧಾನ ಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಪಕ್ಷವಿರೋಧಿ ಹೇಳಿಕೆ ನೀಡಿದ ಹಿರಿಯ ನಟ ಹಾಗೂ ಸಂಸದ ಶತೃಘ್ನ ಸಿನ್ಹಾ ಅವರನ್ನು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಮತ್ತೊಬ್ಬ ಸಂಸದ ಕೈಲಾಶ್ ವಿಜಯ ವರ್ಗೀಯ ಶತೃಘ್ನ ಸಿನ್ಹಾ ಅವರನ್ನು ನಾಯಿಗೆ ಹೋಲಿಕೆ ಮಾಡಿದ್ದಾರೆ. "ಜಬ್ ಗಾಡಿ ಚಲ್ತಾ ಹೈ ಕುತ್ತಾ ನೀಚೆ ಚಲ್ತಾ ಹೈ,  ಕುತ್ತಾ ಸಮ್ಜಾತಾ ಹೈಗಾಡಿ ಮೇರೆ ಭರೋಸೆ ಚಲ್ ರಹಿ ಹೈ" ಕಾರು ಓಡುತ್ತಿರುವಾಗ ನಾಯಿ ಹಿಂದೆ ಓಡಿಬರುತ್ತಿರುತ್ತೆ, ಆದರೆ ನಾಯಿ ತನ್ನಿಂದಲೇ ಕಾರು ಓಡುತ್ತಿದೆ ಎಂಬ ಭ್ರಮೆಯಲ್ಲಿರುತ್ತದೆ. ಹಾಗೆ ಶತೃಘ್ನ ಸಿನ್ಹಾ ಕೂಡ ತಮ್ಮಿಂದಲೇ ಪಕ್ಷ ನಿಂತಿದೆ ಎಂಬ ಭಾವನೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ನಡೆಯುತ್ತಿಲ್ಲ. ಇಡೀ ಸಂಘಟನೆಯೇ ಬಿಜೆಪಿ ಹಿಂದಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com