ದೇಶ

ವಿದೇಶ ಪ್ರವಾಸ ಬಿಟ್ಟು, ಕೆಲಸ ಆರಂಭಿಸಿ

ಬಿಹಾರದ ಫಲಿತಾಂಶವು ಬಿಜೆಪಿ ಮತ್ತು ಆರೆಸ್ಸೆಸ್‍ನ ವಿಭಜನೆಯ ಅಜೆಂಡಾಗೆ ಆದ ಸೋಲು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ಫಲಿತಾಂಶ...

ವಿದೇಶ ಪ್ರವಾಸ ಬಿಟ್ಟು, ಕೆಲಸ ಆರಂಭಿಸಿ
ರಾಹುಲ್ ಗಾಂಧಿ
Published On :
 ನವದೆಹಲಿ :  ಬಿಹಾರದ ಫಲಿತಾಂಶವು ಬಿಜೆಪಿ ಮತ್ತು ಆರೆಸ್ಸೆಸ್‍ನ ವಿಭಜನೆಯ ಅಜೆಂಡಾಗೆ ಆದ ಸೋಲು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ಫಲಿತಾಂಶ ಹೊರಬಿದ್ದೊಡನೆ ಪ್ರತಿಕ್ರಿಯೆ ನೀಡಿದ ರಾಹುಲ್, ``ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ವಿದೇಶ ಪ್ರವಾಸವನ್ನು ನಿಲ್ಲಿಸಿ, ದೇಶದ ರೈತರು, ಕಾರ್ಮಿಕರನ್ನು ಮತ್ತು ಯುವಜನರತ್ತ ಸಾಗುವ ಕೆಲಸ  ಮಾಡಬೇಕಿದೆ'' ಎಂದಿದ್ದಾರೆ.
 ನಿಮ್ಮ(ಮೋದಿ) ಕಾರು ವರ್ಷದ ಹಿಂದೆಯೇ ನಿಂತು ಬಿಟ್ಟಿದೆ. ಕಾರು ಸ್ಟಾರ್ಟ್ ಮಾಡಿ, ಆಕ್ಸೆಲರೇಟರ್ ಒತ್ತಿ. ಇಲ್ಲದಿದ್ದರೆ, ಜನರೇ ನಿಮ್ಮನ್ನು ಹೊರಹಾಕುತ್ತಾರೆ.
 ಈ ಫಲಿತಾಂಶವು ವಿಭಜನೆಯ ಮೇಲೆ ಏಕತೆಯ, ದರ್ಪದ ಮೇಲೆ ವಿನಯತೆಯ, ದ್ವೇಷದ ಮೇಲೆ ಪ್ರೀತಿಯ ಗೆಲವು.
 ಮೋದಿ ತಮ್ಮ ಅಹಂಕಾರ ಬಿಡಬೇಕು.ಅದು ಅವರಿಗೂ, ದೇಶಕ್ಕೂ ಒಳ್ಳೆಯದು
ಬಿಹಾರದ ಜನತೆ ಕಳುಹಿಸಿದ ಸಂದೇಶವು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಮೋದಿಯವರೇ ಅರ್ಥ ಮಾಡಿಕೊಳ್ಳಿ ನೀವಾಗಲೀ, ಬಿಜೆಪಿ, ಆರೆಸ್ಸೆಸ್ ಆಗಲೀ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಛೂ ಬಿಟ್ಟು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಈ ದೇಶವು ಎಲ್ಲರಿಗೂ ಸೇರಿದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.