ನವದೆಹಲಿ: ಹಿಂದೂ ವಿಧವೆಯ ಆಸ್ತಿ ಹಕ್ಕು ಕೇವಲ ಔಪಚಾರಿಕ ಹಕ್ಕಲ್ಲ, ಅದು ಆಧ್ಯಾತ್ಮಿಕ ಹಾಗೂ ನೈತಿಕವಾಗಿ ಆಕೆಯ ಸಂಪೂರ್ಣ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ..ತನ್ನ ಆಸ್ತಿಯ ಹಕ್ಕನ್ನು ಅನ್ಯರೊಬ್ಬರಿಗೆ ನೀಡಿ ವೀಲುನಾಮೆ ಮಾಡಿದ್ದ ಆಂಧ್ರದ ವಿಧವೆಯೊಬ್ಬರ ಹಕ್ಕನ್ನು ಎತ್ತಿಹಿಡಿದಿದ್ದ ಆಂಧ್ರ ಹೈಕೋರ್ಟ್ ನ ತೀರ್ಪನ್ನು ಸುಪ್ರೀಂ ಸಮರ್ಥಿಸಿದೆ..ತನ್ನ ಆಸ್ತಿಯನ್ನು ಆಕೆ ಇಷ್ಟ ಬಂದಂತೆ ಬಳಸಿಕೊಳ್ಳಲು ಸ್ವತಂತ್ರಳು ಎಂದು ನ್ಯಾಯಪೀಠ ಹೇಳಿದೆ. ಹಿಂದೂ ಕಾನೂನಿನಲ್ಲಿ, ಪತ್ನಿಗೆ ಜೀವನಾಂಶ ನೀಡುವ ಬಾಧ್ಯತೆ ಪತಿಯದ್ದಾಗಿದೆ..ವಿಧವೆಗೆ ಆಸ್ತಿ ನೀಡಬೇಕಾದ್ದು ಔಪಚಾರಿಕವಲ್ಲ, ಅದು ಆಕೆಯ ಮೌಲಿಕ, ಆಧ್ಯಾತ್ಮಿಕ, ನೈತಿಕ ಹಕ್ಕು. ಕಾಯ್ದೆಯ 14(1) ವಿಧಿಯನ್ವಯ ಜೀವನಾಂಶ ಆಕೆಯ ಸಂಪೂರ್ಣ ಹಕ್ಕಾಗುತ್ತದೆ ಎಂದಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics