ಕಾನ್ಪುರ: ಚಲಿಸುತ್ತಿರುವ ಕಾರಿನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿರುವ ಕಾರಿನಲ್ಲಿ ಎಂಟನೇ ಕ್ಲಾಸಿನ ವಿದ್ಯಾರ್ಥಿನಿಯೊಬ್ಬಳನ್ನು ನಾಲ್ವರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ ಬಗ್ಗೆ ವರದಿಯಾಗಿದೆ. ವಿದ್ಯಾರ್ಥಿನಿ ಔಷಧಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಎರಡು ಮಾನಭಂಗ ಪ್ರಕರಣಗಳು ವರದಿಯಾಗಿವೆ. 
ಪ್ರಕರಣ 1: ಚಲಿಸುತ್ತಿರುವ ಕಾರಿನಲ್ಲಿ ಎಂಟನೇ ಕ್ಲಾಸಿನ ವಿದ್ಯಾರ್ಥಿನಿಯೊಬ್ಬಳನ್ನು ನಾಲ್ವರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ ಬಗ್ಗೆ ವರದಿಯಾಗಿದೆ. ವಿದ್ಯಾರ್ಥಿನಿ ಔಷಧಿ ಖರೀದಿಸಲೆಂದು ಹೋದಾಗ ಚಕೇರಿ ಪೊಲೀಸ್ ಠಾಣೆಯ ಬಳಿ ಆಕೆಯನ್ನು ಅಪಹರಿಸಲಾಗಿತ್ತು. ಅಪಹರಿಸಿದ ನಂತರ ನಾಲ್ಕು ಮಂದಿ ಸೇರಿ ಆಕೆಯನ್ನು ಸಾಮೂಹಿಕ ಅತ್ಯಾಚಾರಗೈದಿದ್ದಾರೆ.  ಅತ್ಯಾಚಾರಗೈದವರು ತನ್ನನ್ನು ಉನ್ನಾವೋ ಜಿಲ್ಲೆಯ ಬಂತಾರಾ ಟೋಲ್ ಪ್ಲಾಜಾ ಬಳಿಯಲ್ಲಿರುವ ಪೊದೆ ಬಳಿ ಎತ್ತಿ ಬಿಸಾಡಿ ಹೋಗಿದ್ದಾರೆ ಎಂದು ಸಂತ್ರಸ್ತೆಯ ಹೇಳಿಕೆ ನೀಡಿದ್ದಾಳೆ.
ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಶಂಕಿತ ಆರೋಪಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಪ್ರಕರಣ 2 : ಪತಾರಾ ಗ್ರಾಮದಲ್ಲಿ  16ರ ಹರೆಯದ ಹುಡುಗಿಯೊಬ್ಬಳನ್ನು ಅನಾಮಿಕ ಮತ್ತು ಆತನ ಗೆಳೆಯ ಸೇರಿ ಅತ್ಯಾಚಾರಗೈದಿದ್ದಾರೆ.
ಅತ್ಯಾಚಾರಕ್ಕೊಳಗಾದ ಹುಡುಗಿ ಅವಳ ಅಪ್ಪನಿಗೆ ಊಟ ಕೊಡಲೆಂದು ಹೊಲಕ್ಕೆ ಹೋದಾಗ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಈ ಪ್ರಕರಣದ ಬಗ್ಗೆ ಘಟಂಪುರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. 
ಭಾರತದಲ್ಲಿ ಅತೀ ಹೆಚ್ಚು ನಡೆಯುವ ಅಪರಾಧಗಳಲ್ಲಿ ಅತ್ಯಾಚಾರವು ನಾಲ್ಕನೇ ಸ್ಥಾನದಲ್ಲಿದೆ.  ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ 2013ರ ವಾರ್ಷಿಕ ವರದಿ ಪ್ರಕಾರ 2012ರಲ್ಲಿ  24, 923 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 24,470 ಪ್ರಕರಣಗಳಲ್ಲಿ ಪರಿಚಿತರೇ ಮಹಿಳೆಯರ ಮೇಲೆ ಅತ್ಯಾಚಾರಗೈದ ಪ್ರಕರಣಗಳಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com