ಆರ್‏ಎಸ್ಎಸ್, ಬಿಜೆಪಿಯಿಂದಲೇ ದೇಶದಲ್ಲಿ ಗಲಭೆ ಸೃಷ್ಟಿ: ರಾಹುಲ್ ಆರೋಪ

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ ಎಸ್ಎಸ್) ಬಿಜೆಪಿ ಗೂಂಡಾಗಳು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ನವದೆಹಲಿ: ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‏ಎಸ್ಎಸ್) ಬಿಜೆಪಿ ದೊಂಬಿಯನ್ನು ಎಬ್ಬಿಸುತ್ತವೆ ಆದರೆ ಕಾಂಗ್ರೆಸ್ ಜನರಿಗೆ ಒತ್ತಾಸೆ ನೀಡುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣೆ ಹಿನ್ನೆಲೆ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಜಾತಿ ಆಧಾರದ ಮೇಲೆ ಸಮಾಜವನ್ನು ಆರ್ ಎಸ್ಎಸ್, ಬಿಜೆಪಿ ದೇಶ ಹೊಡೆಯುವ ಯತ್ನ ಮಾಡುತ್ತಿದ್ದು ಗೂಂಡಾಗಳಂತೆ ವರ್ತಿಸುತ್ತಿದೆ. ಕಾಂಗ್ರೆಸ್ ಎಂದಿಗೂ ಏಕತೆಯನ್ನು ಬಯಸುವುದರಿಂದ ಆರ್ ಎಸ್ಎಸ್, ಬಿಜೆಪಿಯನ್ನು ವಿರೋಧಿಸುತ್ತದೆ ಎಂದರು. 
ಇದೇ ವೇಳೆ ರಾಹುಲ್ ಗಾಂಧಿ ಅವರ ದ್ವಿಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುವುದಾದರೆ ನನ್ನೊಂದಿಗೆ ನೇರವಾಗಿ ಹೋರಾಟ ಮಾಡಿ. ಅದನ್ನು ಬಿಟ್ಟು ಪರೋಕ್ಷ ಹೋರಾಟ ಯಾಕೆ ಬೇಕು. ನನ್ನ ತಪ್ಪಿದ್ದರೆ ನನ್ನ ವಿರುದ್ಧ ತನಿಖೆಗೆ ಆದೇಶಿಸಿ, ತಪ್ಪಿತಸ್ಥ ಎಂದು ಸಾಬೀತಾದರೆ ಜೈಲಿಗೂ ಹೋಗಲು ಸಿದ್ಧ ಎಂದು ಹೇಳುವ ಮೂಲಕ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. 
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಸಂಖ್ಯೆ ಕುರಿತಂತೆ ಬಿಜೆಪಿ ಲೇವಡಿ ಮಾಡುತ್ತಿತ್ತು. ಇಂತಹ ಕಾಂಗ್ರೆಸ್ ಜನಾದೇಶದ ಮೂಲಕ ಎನ್ ಡಿಎ ಸರ್ಕಾರದ ಭೂ ಸ್ವಾಧೀನ ಮಸೂದೆಯನ್ನು ಹಿಂಪಡೆಯುವಂತೆ ಮಾಡಿತ್ತು. ಬಿಹಾರದಲ್ಲಿ ಬಹುಮತ ಪಡೆಯುವುದಾಗಿ ಬಿಜೆಪಿ ಹುಮ್ಮಸ್ಸಿನಿಂದ ಓಡಾಡುತ್ತಿತ್ತು. ಆದರೆ ಬಿಜೆಪಿಯ ಅಸ್ವಿತ್ವ ಏನು ಎಂಬುದನ್ನು ಬಿಹಾರ ಚುನಾವಣೆ ಸಾಬೀತುಪಡಿಸಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com