ಒತ್ತಡ ಮತ್ತು ಪ್ರಯಾಸದಿಂದ ಬದಲಾವಣೆ ಸಾಧ್ಯವಿಲ್ಲ: ನರೇಂದ್ರ ಮೋದಿ

ಒತ್ತಡ ಮತ್ತು ಪ್ರಯಾಸದಿಂದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಐಎಎಸ್ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ನವದೆಹಲಿ: ಒತ್ತಡ ಮತ್ತು ಪ್ರಯಾಸದಿಂದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು  ಐಎಎಸ್ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.

2013 ನೇ ಸಾಲಿನ 169 ಐಎಎಸ್ ಅಧಿಕಾರಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ  ನರೇಂದ್ರ ಮೋದಿ, ಧನಾತ್ಮಕ ಬದಲಾವಣೆ ತಂದರೆ ದೇಶಕ್ಕೆ ಅನುಕೂಲವಾಗುತ್ತದೆ ಎಂದು ಐಎಎಸ್ ಅಧಿಕಾರಿಗಳಿಗೆ ಹೇಳಿದರು.

ಭಾರತದ ಹಲವಾರು ಜಿಲ್ಲೆಗಳಲ್ಲಿ ಈ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಅಧಿಕಾರಿಗಳೆಲ್ಲಾ ಧನಾತ್ಮಕ ಬದಲಾವಣೆ ತಂದರೆ ಮಾತ್ರ ದೇಶಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಹತ್ತು ವರ್ಷಗಳು ಬಹಳ ನಿರ್ಣಾಯಕವಾಗಿದ್ದೂ, ಪ್ರಬಲ ತಳಹದಿ ರೂಪಿಸಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ. ನಮ್ಮ ದೃಷ್ಟಿಯಂತೆ ನಮ್ಮ ಕ್ರಿಯೆಗಳಿರಬೇಕು ಎಂದು ಹೇಳಿದ ಮೋದಿ, ನಾವು ಏನು ಕಲಿಯುತ್ತೇವೆ ಎಂಬುದು ಬಹಳ ಮಹತ್ವವಾದದ್ದು ಎಂದು ಹೇಳುವ ಮೂಲಕ ಮತ್ತಷ್ಟು ಜನಸ್ನೇಹಿ ಹಾಗೂ ಉತ್ತಮ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com