

ನವದೆಹಲಿ: ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪದೇ ಪದೇ ಬಿಜೆಪಿ ನಾಯಕತ್ವಕ್ಕೆ ಸವಾಲು ಹಾಕುತ್ತಿರುವ ಸಂಸದ ಶತ್ರುಘ್ನ ಸಿನ್ಹಾ ಈ ಬಾರಿ ರಾಹುಲ್ ಗಾಂಧಿಯನ್ನು ಹಾಡಿ ಹೊಗಳಿದ್ದಾರೆ.
ಎಐಸಿಸಿ ಉಪಾದ್ಯಕ್ಷ ರಾಹುಲ್ ಗಾಂಧಿ ರೈಸಿಂಗ್ ಸ್ಟಾರ್, ರಾಹುಲ್ ಗಾಂಧಿ ನೇತೃತ್ವದ ನೂತನ ಸರಕಾರಕ್ಕೆ ನನ್ನ ಶುಭ ಹಾರೈಕೆಗಳು ಎಂದು ನಟ, ರಾಜಕಾರಣಿ ಸಿನ್ಹಾ ಗುರುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾರಿ ವಾಗ್ದಾಳಿ ಮಾಡಿದ್ದರು. ಅದರ ಬೆನ್ನಿಗೇ ಸಿನ್ಹಾ, ರಾಹುಲ್ ಗಾಂಧಿಯನ್ನು ರೈಸಿಂಗ್ ಸ್ಟಾರ್ ಎಂದು ಹೊಗಳಿದ್ದಾರೆ. ಆ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಕೆಣಕಿದ್ದಾರೆ.
ಇನ್ನು ಬಿಹಾರ ಚುನಾವಣೆಯಲ್ಲಿ ಜಯ ಸಾಧಿಸಿರುವುದಕ್ಕೆ ಲಾಲೂ ಪ್ರಸಾದ್ ಯಾದವ್ ಅವರಿಗೆ ಶತೃಘ್ನ ಸಿನ್ಹಾ ಶುಭಾಶಯ ತಿಳಿಸಿದ್ದಾರೆ