

ವಾಷಿಂಗ್ಟನ್: ಮುಂಬೈ ದಾಳಿಗೆ ಸಂಬಂಧಿಸಿ ಪಾಕಿಸ್ತಾನಿ ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಲು ಒಪ್ಪಿದ್ದಾನೆ.
ಈ ಅಂಶವನ್ನು ಆತನ ವಕೀಲ ಜಾನ್ ಟಿ.ತೆಸಿಸ್ ತಿಳಿಸಿದ್ದಾರೆ. ಈ ಬಗ್ಗೆ ಟಾಡಾ ಕೋರ್ಟ್ ನೀಡಿರುವ ವರದಿಗಳನ್ನು ಗಮನಿಸಿರುವುದಾಗಿ ಹೇಳಿರುವ ಜಾನ್, ಕಾನೂನು ಪ್ರಕ್ರಿಯೆಗಳನ್ನು ತಮ್ಮ ಕಕ್ಷಿದಾರ ಪಾಲಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ಸರ್ಕಾರದ ಜತೆಗೆ 2010ರಲ್ಲಿ ಅಮೆರಿಕದ ಅಟಾರ್ನಿ ಕಚೇರಿ ಜತೆಗೆ ಮಾಡಿಕೊಂಡ ಒಡಂಬಡಿಕೆಯಂತೆ ಸರ್ಕಾರ ವಿದೇಶಿ ನ್ಯಾಯಾಲಯಕ್ಕೆ ಲಿಖಿತ, ವೀಡಿಯೊ ಕಾನ್ಫರೆನ್ಸ್ ಮೂಲಕ ಅಥವಾ ಲೆಟರ್ಸ್ ರೊಗೇಟರಿ ಮೂಲಕ ವಿಚಾರಣೆಗೆ ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.