ದೇಶ

ಲೈಂಗಿಕ ಕ್ರಿಯೆಗೆ ಮುನ್ನ ಎಚ್ ಐವಿ ಪ್ರಮಾಣಪತ್ರ ತೋರಿಸುವಂತೆ ಕೇಳಿದ ಪತ್ನಿ!

ದೀಪಾವಳಿ ಹಬ್ಬಕ್ಕೆ ಉಡುಗೊರೆಯೊಂದಿಗೆ ಮನೆಗೆ ಬಂದ ಗಂಡನಿಗೆ, ಎಚ್ ಐವಿ ಸೋಂಕು ಪರೀಕ್ಷೆ ಮಾಡಿರುವ ಬಗ್ಗೆ ಪ್ರಮಾಣ ಪತ್ರ ನೀಡುವಂತೆ ಕೇಳಿ ಹೆಂಡತಿ ಶಾಕ್ ನೀಡಿದ್ದಾಳೆ...

ಲೈಂಗಿಕ ಕ್ರಿಯೆಗೆ ಮುನ್ನ ಎಚ್ ಐವಿ ಪ್ರಮಾಣಪತ್ರ ತೋರಿಸುವಂತೆ ಕೇಳಿದ ಪತ್ನಿ!
ಸಾಂದರ್ಭಿಕ ಚಿತ್ರ
Published On :

ಲಕ್ನೋ: ವರ್ಷ ಪೂರ್ತಿ ಮುಂಬಯಿಯಲ್ಲಿ ನೌಕರಿ ಮಾಡಿ ದೀಪಾವಳಿ ಹಬ್ಬಕ್ಕೆ ಉಡುಗೊರೆಯೊಂದಿಗೆ ಮನೆಗೆ ಬಂದ ಗಂಡನಿಗೆ, ಎಚ್ ಐವಿ ಸೋಂಕು ಪರೀಕ್ಷೆ ಮಾಡಿರುವ ಬಗ್ಗೆ ಪ್ರಮಾಣ ಪತ್ರ ನೀಡುವಂತೆ ಕೇಳಿ ಹೆಂಡತಿ ಶಾಕ್ ನೀಡಿದ್ದಾಳೆ.

ಉತ್ತರ ಪ್ರದೇಶದ ಲಕ್ನೋದ ಪತ್ತೇಪುರ್ ಜಿಲ್ಲೆಯ ಉದಾಯ್ ಸರಾಯ್ ಗ್ರಾಮದ ನಿವಾಸಿ ರಾಮ್ ಕಿಶೋರ್ ಮುಂಬಯಿಯಲ್ಲಿ  ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಪತ್ನಿ ಅನಿತಾ ಮನೆಗೆ ಬಂದ ತನ್ನ ಪತಿಗೆ ಎಚ್ ಐ ವಿ ಸೋಂಕು ಪರೀಕ್ಷೆ ಮಾಡಿಸಿರುವ ಪ್ರಮಾಣ ಪತ್ರ ಕೇಳಿದ್ದಾಳೆ. ಹೆಂಡತಿ ಕೇಳಿದ ಈ ಪ್ರಶ್ನೆಗೆ ಗಂಡ ಶಾಕ್ ಆಗಿದ್ದಾನೆ.

ಉತ್ತರ ಪ್ರದೇಶದ ಈ ಹಳ್ಳಿಯಲ್ಲಿ 200 ಮನೆಗಳಿದ್ದು, ಅದರಲ್ಲಿ ಸುಮಾರು 250 ಪುರುಷತರು ಮುಂಬಯಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ ಮಾತ್ರ ಬರುವ ಈ ಪುರುಷರು, ಹಣ, ಉಡುಗೊರೆ ಜೊತೆಗೆ ಎಚ್ ಐ ವಿ ಸೋಂಕನ್ನು ಹೊತ್ತು ತರುತ್ತಿದ್ದಾರೆ.

ಹೀಗಾಗಿ ಅಲ್ಲಿನ ಮಹಿಳೆಯರು ತಮ್ಮ ಗಂಡಂದಿರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಮುನ್ನ ಎಚ್ ಐ ವಿ ಪ್ರಮಾಣ ಪತ್ರ ತೋರಿಸುವಂತೆ ಕೇಳುತ್ತಿದ್ದಾರೆ. ಒಂದು ವೇಳೆ ತೋರಿಸದಿದ್ದರೇ ಕರೆದುಕೊಂಡು ಹೋಗಿ ಎಚ್ ಐ ವಿ ಸೋಂಕು ಪರೀಕ್ಷೆ ಮಾಡಿಸುತ್ತಿದ್ದಾರೆ.

ಕಳೆದ 10 ವರ್ಷಗಳಲ್ಲಿ ಈ ಗ್ರಾಮವೊಂದರಲ್ಲೇ ಸುಮಾರು 12 ಮಂದಿ ಎಚ್ ಐವಿ ಸೋಂಕಿಗೆ ಬಲಿಯಾಗಿರುವುದು ಇಲ್ಲಿನ ಮಹಿಳೆಯರನ್ನು ಆತಂಕಕ್ಕೀಡು ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.