ದೇಶದ 40 ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಪುರುಷರಿಗಾಗಿ 'ಸೇವ್ ಇಂಡಿಯನ್ ಫ್ಯಾಮಿಲಿ' ಹೆಸರಿನಲ್ಲಿ 8882498498 ಸಂಖ್ಯೆಯ ಸಹಾಯವಾಣಿಯನ್ನು 1 ವರ್ಷದ ಹಿಂದೆ ಸ್ಥಾಪಿಸಿದ್ದವು. ಸ್ಥಾಪಿತವಾದ ಒಂದೇ ವರ್ಷದಲ್ಲಿ 37 ಸಾವಿರ ಕರೆಗಳು ಬಂದಿವೆ. ಈ ಕರೆಗಳಲ್ಲಿ ಪುರುಷರು ತಮ್ಮ ಮೇಲೆ ಮಹಿಳೆಯರು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ. ವಿಶೇಷವೆಂದರೆ ದಕ್ಷಿಣ ಭಾರತದ ಕರ್ನಾಟಕ ರಾಜ್ಯದಿಂದ ಹೆಚ್ಚು ಕರೆಗಳು ಬಂದಿವೆಯಂತೆ.