ಯುವತಿಗೆ ಬೆಂಕಿ ಹಚ್ಚಿದ ಅನಾಮಿಕ ವ್ಯಕ್ತಿಗಳು

ಅನಾಮಿಕ ವ್ಯಕ್ತಿಗಳು ಯುವತಿಯೊಬ್ಬಳಿಗೆ ಬೆಂಕಿ ಹಚ್ಚಿರುವ ಘಟನೆಯೊಂದು ವಿಹಾರ ತಾಣವೆಂದೇ ಹೆಸರುವಾಸಿಯಾಗಿರುವ ನಾಗ್ಪುರದ ಪಶ್ಚಿಮ ಭಾಗದ ಫುಟುಲಾ ಕೆರೆಯ ಬಳಿ ಭಾನುವಾರ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನಾಗ್ಪುರ: ಅನಾಮಿಕ ವ್ಯಕ್ತಿಗಳು ಯುವತಿಯೊಬ್ಬಳಿಗೆ ಬೆಂಕಿ ಹಚ್ಚಿರುವ ಘಟನೆಯೊಂದು ವಿಹಾರ ತಾಣವೆಂದೇ ಹೆಸರುವಾಸಿಯಾಗಿರುವ ನಾಗ್ಪುರದ ಪಶ್ಚಿಮ ಭಾಗದ ಫುಟುಲಾ ಕೆರೆಯ ಬಳಿ ಭಾನುವಾರ ನಡೆದಿದೆ.

ನಿಖಿತಾ ಸುಲ್ವಾನಿ (20) ಅಕ್ರಮಣಕ್ಕೊಳಗಾದ ಯುವತಿ. ಫುಟುಲಾ ಕೆರೆಯ ಹತ್ತಿರುವಿರುವ ರೆಸ್ಟೋರೆಂಟ್ ಮೇಲಿನ ಮಹಡಿಯಲ್ಲಿ ಯುವತಿ ಕಿರುಚಾಡುತ್ತಿರುವ ಕೂಗು ಕೇಳಿಬಂದಿದೆ. ನಂತರ ಸ್ಥಳಕ್ಕಾಗಮಿಸಿದ ಅಲ್ಲಿನ ಸ್ಥಳೀಯರು ಯುವತಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ.

ಪ್ರಸ್ತುತ ಯುವತಿ ದೇಹ ಶೇ.80ರಷ್ಟು ಭಾಗ ಬೆಂಕಿಗಾಹುತಿಯಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ವರೆಗೂ ಯಾರೊಬ್ಬರನ್ನು ಬಂಧನಕ್ಕೊಳಪಡಸಲಾಗಿಲ್ಲ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com