ಮುಂಬೈ: ನೀರಿನ ಅಭಾವ, ಶೌಚಾಲಯಗಳ ಕೊರತೆ ಎದುರಿಸುತ್ತಿರುವ ಭಾರತಕ್ಕೊಂದು `ಜಲರಹಿತ ಟಾಯ್ಲೆಟ್ ದೊರೆತರೆ ಏನಾಗಬಹುದು? ಐಐಟಿ ಬಾಂಬೆಯ ಹಿರಿಯ ಪ್ರೊಫೆಸರ್ವೊಬ್ಬರು ಇಂತಹ ವಿಶಿಷ್ಟ ಕಲ್ಪನೆ ಯನ್ನು ಸಾಕಾರಗೊಳಿಸಿದ್ದಾರೆ.
ಪ್ರೊ.ಡಾ. ಕಿಶೋರ್ ಮುನ್ಶಿ ಅವರು `ಡ್ರೈ ಸ್ಯಾನ್ ಹೈಜೀನಿಕ್ ಟಾಯ್ಲೆಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಡ್ರೈ ಸ್ಯಾನ್ ವ್ಯವಸ್ಥೆಯಂತೆ ಮಣ್ಣಿನಡಿಯಲ್ಲಿ ದೊಡ್ಡ ಗುಂಡಿ ತೆಗೆದು, ಮಾನವನ ಮಲಮೂತ್ರ ಗಳು ನೇರವಾಗಿ ಮಣ್ಣು ಸೇರುವಂತೆ ಮಾಡಲಾ ಗುತ್ತದೆ.
ಮೂತ್ರವು ಮಣ್ಣು ಸೇರಿದರೆ, ಘನ ತ್ಯಾಜ್ಯ ಮಾತ್ರ ಅಲ್ಲೇ ಉಳಿದು ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. ಇಲ್ಲಿ ನೀವು ನೀರನ್ನು ಫ್ಲಷ್ ಮಾಡಬೇಕಾದ ಅಗತ್ಯವಿರುವುದಿಲ್ಲ ಎಂದಿದ್ದಾರೆ ಮುನ್ಶಿ.