ಕೋಬ್ರಾಪೋಸ್ಟ್ ಮತ್ತು ಗುಲೈಲ್ ತಂಡ ವರ್ಷ ಕಾಲ ನಡೆಸಿದ ರಹಸ್ಯ ಕಾರ್ಯಾಚರಣೆಯನ್ನು ಜಗಜ್ಜಾಹೀರು ಮಾಡಿದ್ದು, ರಾಜ್ಯದ ಎಂಎಲ್‍ಸಿ ಗಣೇಶ್ ಕಾರ್ಣಿಕ್, ಬಿಜೆಪಿ ಮಾಜಿ ಮುಖಂಡ ಶ್ರೀಕರ ಪ್ರಭು, ವಿಎಚ್‍ಪಿ ಮಂಗಳೂರು ಘಟಕದ ಅಧ್ಯಕ್ಷ ಜಗದೀಶ ಶೇಣವ ಸೇರಿ ದೆಹಲಿಯಿಂದ ಕರ್ನಾಟಕದವರೆಗಿನ ರಾಜಕಾರಣಿಗಳು, ಸಂಘಪರಿವಾರದ ಮುಖಂಡರು 'ಲವ್ ಜಿಹಾದ್ ಕುರಿತು ಬಾಯಿಬಿಟ್ಟ ವಿಚಾರ ಗಳನ್ನು ವಿಡಿಯೇ ಸಮೇತವಾಗಿ ಕೋಬ್ರಾಪೋಸ್ಟ್ ಪ್ರಕಟಿಸಿದೆ. 'ಆಪರೇಷನ್ ಜೂಲಿಯೆಟ್' ಹೆಸರಿನ ಕುಟುಕು ಕಾರ್ಯಾಚರಣೆಯಲ್ಲಿ ಮಾತ ನಾಡಿರುವ ರಾಜಕಾರಣಿಗಳು, ಸಂಘಪರಿ ವಾರದ ನಾಯಕರು, `ಲವ್ ಜಿಹಾದ್' ಎಂಬ ಪದವನ್ನು ಹೇಗೆ ಸೃಷ್ಟಿಸಲಾಯಿತು, ಅದನ್ನು ಯಾವ ಸಂದರ್ಭಗಳಲ್ಲಿ ಬಳಸಿ ಕೊಳ್ಳಲಾಗುತ್ತದೆ, ಮುಸ್ಲಿಂ ಯುವಕರನ್ನು ಹೇಗೆ ಸುಳ್ಳು ಅತ್ಯಾಚಾರ, ಅಪಹರಣ ಪ್ರಕರಣಗಳಲ್ಲಿ ಸಿಕ್ಕಿಸಿ ಹಾಕಲಾಗುತ್ತದೆ.