ಕೊಯ್ಯಮತ್ತೂರು: ಚೆನ್ನೈ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ದ್ರಾವಿಡ್ ಮುನ್ನೇಟ್ಟ ಕಳಗಂ(ಡಿಎಂಕೆ) ಪಕ್ಷದ ಖಜಾಂಜಿ ಎಂಕೆ ಸ್ಟಾಲಿನ್ ಪ್ರಯಾಣಿಕರೊಬ್ಬರಿಕೆ ಕಪಾಳಮೋಕ್ಷ ಮಾಡಿ ವಿವಾದಕ್ಕೆ ಗುರಿಯಾಗಿದ್ದು, ಇದೀಗ ಮತ್ತೊಮ್ಮೆ ಆಟೋ ಡ್ರೈವರ್ ಗೆ ಕಪಾಳಮೋಕ್ಷ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ತಮಿಳುನಾಡಿನ ನಿಲ್ಗಿರಿಸ್ ಜಿಲ್ಲೆಯ ಗುಡಲೂರ್ ನಲ್ಲಿ ಪಕ್ಷದ ವತಿಯಿಂದ 'ನಮಕ್ಕು ನಾಮೇ'(ನಮಗೆ ನಾವೇ) ಕ್ಯಾಂಪೆನ್ ವೇಳೆ ಆಟೋ ಡ್ರೈವರ್ ಒಬ್ಬ ಎಂ.ಕೆ ಸ್ಟಾಲಿನ್ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಕಸಿವಿಸಿಗೊಂಡ ಸ್ಟಾಲಿನ್ ಆಟೋ ಡ್ರೈವರ್ ಗೆ ಕಪಾಳಮೋಕ್ಷ ಮಾಡಿದ್ದಾರೆ.
ಸ್ಟಾಲಿನ್ ಆಟೋ ಡ್ರೈವರ್ ಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಗುಂಪಿನಲ್ಲಿ ಸರಾಗವಾಗಿ ನಡೆಯುವ ಸಲುವಾಗಿ ಆಟೋ ಡ್ರೈವರ್ ನನ್ನು ಸ್ಟಾಲಿನ್ ನಿಧನವಾಗಿ ತಳ್ಳಿದರೇ ಬೇಕಂತಲೆ ತಳ್ಳಿಲ್ಲ ಎಂದು ಡಿಎಂಕೆ ಸದಸ್ಯರು ತಮ್ಮ ನಾಯಕ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.