ಮಧ್ಯಪ್ರದೇಶ ನೇಮಕಾತಿ ಹಗರಣ: ದಿಗ್ವಿಜಯ್ ಸಿಂಗ್ ವಿಚಾರಣೆ

ಮಧ್ಯಪ್ರದೇಶ ಅಸೆಂಬ್ಲಿ ಸೆಕ್ರೆಟರಿಯಟ್ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಜನರಲ್ ಸೆಕ್ರೆಟರಿ ದಿಗ್ವಿಜಯ್ ಸಿಂಗ್ ಅವರನ್ನು ಸತತ ಐದು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು...
ಕಾಂಗ್ರೆಸ್ ಜನರಲ್ ಸೆಕ್ರೆಟರಿ ದಿಗ್ವಿಜಯ್  ಸಿಂಗ್ (ಸಂಗ್ರಹ ಚಿತ್ರ)
ಕಾಂಗ್ರೆಸ್ ಜನರಲ್ ಸೆಕ್ರೆಟರಿ ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)
Updated on: 

ಭೋಪಾಲ್: ಮಧ್ಯಪ್ರದೇಶ ಅಸೆಂಬ್ಲಿ ಸೆಕ್ರೆಟರಿಯಟ್ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಜನರಲ್ ಸೆಕ್ರೆಟರಿ ದಿಗ್ವಿಜಯ್  ಸಿಂಗ್ ಅವರನ್ನು ಸತತ ಐದು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು.

19932003ರ ಅವಧಿಯಲ್ಲಿ ಅವರು ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಈ ಹಗರಣ ನಡೆದಿತ್ತು. ಜಹಂಗಿರಾಬಾದ್‍ನ ಎಸ್ಪಿ ಸಲೀಮï ಖಾನ್ ಅವರು ದಿಗ್ವಿಜಯ್ ಸಿಂಗ್ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಕೇಳಲಾದ 250 ಪ್ರಶ್ನೆಗಳಿಗೆ ಉತ್ತರಿಸಿದ ಸಿಂಗ್ ಎಲ್ಲ ನೇಮಕಾತಿಗಳೂ ಕ್ಯಾಬಿನೆಟ್ ಅನುಮೋದನೆಯ ನಂತರವೇ ಆಗಿದೆ ಎಂದೇ ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ. ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆಗೆ ಅವರು ಆಗಮಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com