

ಮುಂಬೈ: ಲೇಖಕ ಸುಧೀಂದ್ರ ಕುಲಕರ್ಣಿಗೆ ಮಸಿ ಬಳಿದ ಘಟನೆ ನಂತರ ಬಹಿರಂಗಗೊಂಡಿದ್ದ ಬಿಜೆಪಿಶಿವಸೇನೆ ನಡುವಿನ ಅಸಮಾಧಾನಕ್ಕೆಸದ್ಯಕ್ಕೆ ವಿರಾಮ ಸಿಕ್ಕಂತಾಗಿದೆ.
ಗುರುವಾರ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಬಿಜೆಪಿ, ಫಡ್ನವಿಸ್ ಸರ್ಕಾರದ ಸಾಧನೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ವಿಚಾರವನ್ನಷ್ಟೇ ಚರ್ಚಿಸಿ, ಶಿವಸೇನೆಯೊಂದಿಗಿನ ಸಖ್ಯ ಮುಂದುವರೆಸುವ ಅಥವಾ ಕಡಿದು ಕೊಳ್ಳುವ ಮಾತುಕತೆಯನ್ನು ಬೇಕೆಂದೇ ಬದಿಗಿಟ್ಟಿತು. ಸಭೆ ಶುರುವಾಗುವ ಮುನ್ನ ಪಕ್ಷದ ಹಲವು ಪ್ರಮುಖ ನಾಯಕರು, ಶಿವಸೇನೆಯೊಂದಿಗಿನ ಮೈತ್ರಿಯ ಬಗ್ಗೆ ಚರ್ಚೆ ನಡೆಯಲಿದೆಯೆಂದೇ ಸುಳಿವು ನೀಡಿದ್ದರು.
ಹೆಸರು ಹೇಳಲಿಚ್ಚಿಸದ ನಾಯಕರೊಬ್ಬರು ಮೈತ್ರಿಯಿಂದ ಹೊರಬರುವ ಸಂಭಾವ್ಯತೆಯನ್ನೂ ಹೇಳಿಕೊಂಡಿದ್ದರು. ಆದರೆ ಅಂಥಹದ್ದೇನು ನಡೆಯಲಿಲ್ಲವೆಂದೂ ಪಕ್ಷದ ಭಾತ್ಮೀದಾರ ಮಾಧವ ಭಂಡಾರಿ ತಿಳಿಸಿದರು.