ಜಮ್ಮು: ಮಂಗಳವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಉದಂಪುರ್ ಜೆಲ್ಲೆಯಲ್ಲಿ ಬಸ್ಸೊಂದು ಕಣಿವೆಗೆ ಬಿದ್ದು, 14 ಜನರು ಸಾವಿಗೀಡಾದ ಘಟನೆ ವರದಿಯಾಗಿದೆ.
ಗೋರ್ಡಿ ಗ್ರಾಮದಿಂದ ರಾಮನಗರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಕಿಕ್ಕಿರಿದು ಜನ ತುಂಬಿದ್ದರು. ಇನ್ನೇನು ರಾಮನಗರಕ್ಕೆ ತಲುಪಲು 5 ಕಿಮೀ ಇದೆ ಎನ್ನುವಾಗ ಸ್ಕಿಡ್ ಆದ ಬಸ್ ಕಣಿವೆಗೆ ಉರುಳಿದೆ. ಈ ಅಪಘಾತದಲ್ಲಿ 16 ಮಂದಿಗೆ ಗಾಯಗಳಾಗಿವೆ.
13 ಜನರು ಘಟನಾಸ್ಥಳದಲ್ಲೇ ಸಾವಿಗೀಡಾಗಿದ್ದು , ಆಸ್ಪತ್ರೆಗೆ ದಾಖಲಿಸುವ ವೇಳೆ ಓರ್ವ ಸಾವನ್ನಪ್ಪಿದ್ದಾರೆ. 10 ಮಂದಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಜಮ್ಮುವಿನಲ್ಲಿರುವ ಸರ್ಕಾರಿ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆಯ