ಭೂಕಂಪ ಪೀಡಿತ ಪಾಕಿಸ್ತಾನಕ್ಕೆ ನೆರವು ನೀಡಲು ಭಾರತ ಸಿದ್ಧವಿದೆ: ಪ್ರಧಾನಿ ಮೋದಿ

ಭೂಕಂಪಕ್ಕೆ ತುತ್ತಾಗಿರುವ ಪಾಕಿಸ್ತಾನಕ್ಕೆ ನೆರವು ನೀಡಲು ಭಾರತ ಸಿದ್ಧವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ನವದೆಹಲಿ: ಭೂಕಂಪಕ್ಕೆ ತುತ್ತಾಗಿರುವ ಪಾಕಿಸ್ತಾನಕ್ಕೆ ನೆರವು ನೀಡಲು ಭಾರತ ಸಿದ್ಧವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅಪ್ಘಾನಿಸ್ಥಾನ-ಪಾಕಿಸ್ತಾನ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವುದರ ಬಗ್ಗೆ ತಿಳಿದುಬಂದಿದೆ. ಎಲ್ಲರ  ಸುರಕ್ಷತೆಗೆಗಾಗಿ ಪ್ರಾರ್ಥಿಸುವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ತ್ವರಿತಗತಿಯ ಅಂದಾಜು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಪ್ಘಾನಿಸ್ಥಾನ ಹಾಗೂ ಪಾಕಿಸ್ತಾನಕ್ಕೆ ಅಗತ್ಯ ನೆರವು ನೀಡಲು ಸಿದ್ಧವಿದ್ದೇವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಅಪ್ಘಾನಿಸ್ಥಾನದ ಕೇಂದ್ರವಾಗಿದ್ದ ಭೂಕಂಪನದಿಂದ ಪಾಕಿಸ್ತಾನದಲ್ಲೂ ಭೂಮಿ ಪ್ರಬಲವಾಗಿ ನಡುಗಿದ್ದು ಇಬ್ಬರು ಮಕ್ಕಳೂ ಸೇರಿ ಕನಿಷ್ಠ 13 ಜನ ಸಾವನ್ನಪ್ಪಿದ್ದಾರೆ.  ಭೂಕಂಪನ ತೀವ್ರತೆ ರಿಕ್ಟರ್ ಮಾಪನದಲ್ಲಿ 7 .7 ರಷ್ಟಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com