ನವದೆಹಲಿ: ಗೋಮಾಂಸಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ನಡೆಯುತ್ತಿರುವ ದಾಳಿಗಳು ಎಮ್ಮೆ ಮಾಂಸ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ಆರು ತಿಂಗಳಿನಿಂದ ಎಮ್ಮೆ ಮಾಂಸ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ಆರು ತಿಂಗಳಿನಿಂದ ಎಮ್ಮೆ ಮಾಂಸ ರಫ್ತು ಸತತವಾಗಿ ಕುಸಿಯುತ್ತಿದ್ದು ನೂರಾರು ಕೋಟಿ ರು. ನಷ್ಟ ಅನುಭವಿಸುವಂತಾಗಿದೆ.
ಭಾರತದಿಂದ ಬೇಡಿಕೆ ಇರುವಷ್ಟು ಪ್ರಮಾಣದ ಮಾಂಸ ರಫ್ತು ಮಾಡಲು ಸಾಧ್ಯವಾಗದಿರುವುದರಿಂದ ಚೀನಾದಂತಹ ದೇಶಗಳು ಬ್ರೆಜಿಲ್ನಿಂದ ಆಮದು ಮಾಡಿಕೊಳ್ಳುತ್ತಿವೆ. ಹಿಂದೂ ಧರ್ಮ ಎಂದು ಹೇಳಿಕೊಳ್ಳುವ ಕೆಲವರು ಗೋಮಾಂಸ ವಿರೋಧಿಸಿ ದಾಳಿಗಳನ್ನು ನಡೆಸುತ್ತಿದ್ದಾರೆ. ಗೋವುಗಳನ್ನು ಕೊಂದು ಎಮ್ಮೆ ಮಾಂಸ ಎಂದು ಲೇಬಲ್ ಅಂಟಿಸಿ ರಫ್ತು ಮಾಡುತ್ತಿದ್ದಾರೆ ಎಂತಲೂ ಆರೋಪಿಸಿದ್ದಾರೆ.
ವಾಹನಗಳಲ್ಲಿ ಎಮ್ಮೆಗಳನ್ನು ಸಾಗಿಸುತ್ತಿದ್ದರೂ ಹಸುಗಳನ್ನು ಸಾಗಿಸುತ್ತಿದ್ದಾರೆ ಎಂದು ಥಳಿಸುವ ಘಟನೆಗಳು ದೇಶದ ವಿವಿದೆಡೆಗಳಲ್ಲಿ ನಡೆಯುತ್ತಿವೆ. ಇದು ಎಮ್ಮೆ ಮಾಂಸ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ರಫ್ತು ಕಂಪನಿಗಳು ಹೇಳಿವೆ. ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ರಫ್ತು ಕಂಪನಿಗಳಿದ್ದು ಅಲ್ಲಿ ಕೆಲವು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ.
ವಿಶ್ವದಲ್ಲಿ ಎಮ್ಮೆ ಮಾಂಸ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಏಪ್ರಿಲ್ ಸಪ್ಟೆಂಬರ್ ಅವಧಿಯಲ್ಲಿ ರಫ್ತು ಶೇ. 13. 2ರಷ್ಟು ಕುಸಿದಿದ್ದು, 5, 98,901 ಟನ್ ಗೆ ಇಳಿದಿದೆ. ಮೌಲ್ಯದ ಲೆಕ್ಕಾಚಾರದಲ್ಲಿ ಶೇ. 15.5 ರಷ್ಟು ಕುಸಿದಿದೆ.
ಗೋಮಾಂಸ ಮತ್ತು ಎಮ್ಮೆ ಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ಗೆ ಎಲ್ಲ ವಹಿವಾಟು ವರ್ಗವಾಗುತ್ತಿದೆ. ಚೀನಾ, ವಿಯೆಟ್ನಾಂ ಸೇರಿದಂತೆ ಪೂರ್ವದ ದೇಶಗಳಿಗೆ ಸಾಗಣೆ ಸುಲಭವಾಗುವುದರಿಂದ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದವು. ಈಗ ಲ್ಲ ಆರ್ಡರ್ ಬ್ರೆಜಿಲ್ ಗೆ ನೀಡುತ್ತಿವೆ.
ಒಂದು ವೇಳೆ ರಫ್ತು ಆರ್ಡರ್ ಗಳನ್ನು ಪಡೆದಲ್ಲಿ ಸರಬರಾಜು ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ.ಒಂದು ವೇಳೆ ಸರಬರಾಜುದಾರರೇ ಮಾರಾಟ ಮಾಡಲು ಮುಂದಾದರೆ ಅವರಿಗೂ ಕಿರುಕುಳ ನೀಡಲಾಗುತ್ತಿದೆ ಎಂದು ಉತ್ತರ ಪ್ರದೇಶದ ಅಲ್ ಹಮ್ದ್ ಆಗ್ರೋ ಪುಡ್ ಪ್ರಾಡಕ್ಟ್ಸ್ನ ನಿರ್ದೇಶಕ ಮೊಹಮ್ಮದ್ ತೌಸೀಫ್ ಹೇಳಿದ್ದಾರೆ. ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಎಲ್ಲ ಕಡೆಗಳಿಂದ ವ್ಯಾಪಕ ಟೀಕೆಗಳು ಬಂದ ನಂತರ ಪ್ರಧಾನಿ ಮೋದಿ ದಾದ್ರಿ ಘಟನೆಯನ್ನು ಖಂಡಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಹಸ ಕಳವು ಆರೋಪದ ಮೇರೆಗೆ ಹತ್ಯೆ ಮಾಡಲಾಯಿತು.