ಕೇರಳ ಕ್ಯಾಂಟೀನ್ ಗೋಮಾಂಸ ವಿವಾದ: ದೂರು ನೀಡಿದ್ದ ಹಿಂದೂ ಸೇನಾ ಮುಖ್ಯಸ್ಥ ಬಂಧನ

ಜಂತರ್ ಮಂತರ್ ಸಮೀಪದಲ್ಲಿರುವ ಕೇರಳ ರಾಜ್ಯ ಸರ್ಕಾರದ ಕೇರಳ ಹೌಸ್ ಕ್ಯಾಂಟೀನ್ ನಲ್ಲಿ ಬೀಫ್ ಕರಿ ವಿವಾದ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ಇದೀಗ ಪ್ರಕರಣ ಸಂಬಂಧ ತಪ್ಪಾಗಿ ದೂರು ನೀಡಿದ್ದ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಎಂಬುವವರನ್ನು...
ದೆಹಲಿ ಪೊಲೀಸರು ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಿಪಿಎಂ ಸಂಸದರು
ದೆಹಲಿ ಪೊಲೀಸರು ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಿಪಿಎಂ ಸಂಸದರು

ನವದೆಹಲಿ: ಜಂತರ್ ಮಂತರ್ ಸಮೀಪದಲ್ಲಿರುವ ಕೇರಳ ರಾಜ್ಯ ಸರ್ಕಾರದ ಕೇರಳ ಹೌಸ್ ಕ್ಯಾಂಟೀನ್ ನಲ್ಲಿ ಬೀಫ್ ಕರಿ ವಿವಾದ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ಇದೀಗ ಪ್ರಕರಣ ಸಂಬಂಧ ತಪ್ಪಾಗಿ ದೂರು ನೀಡಿದ್ದ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಎಂಬುವವರನ್ನು ದೆಹಲಿ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧನ ಕುರಿತಂತೆ ಮಾತನಾಡಿರುವ ದೆಹಲಿ ಡಿಸಿಪಿ ಜತಿನ್ ನರ್ವಾಲ್ ಅವರು, ಕೇರಳ ಬೀಫ್ ಕರ್ರಿ ಪ್ರಕರಣ ಸಂಬಂಧ ಇದೀಗ ವಿಷ್ಣು ಗುಪ್ತ ಎಂಬುವವರನ್ನು ಬಂಧನಕ್ಕೊಳಪಡಿಸಿಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಆದರೆ, ವಿಚಾರಣೆ ವೇಳೆ ಗುಪ್ತ ಯಾವುದೇ ಮಾಹಿತಿಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಕೇರಳ ಹೌಸ್ ಕ್ಯಾಂಟೀನ್ ನಲ್ಲಿ ಬೀಫ್ ತಿನ್ನಲು ಅನುವುಮಾಡಿಕೊಡಲಾಗಿದೆ ಎಂದು ಹಿಂದು ಸೇನಾ ಸಂಸ್ಥೆಯ ವಿಷ್ಣು ಗುಪ್ತ ಎಂಬ ವ್ಯಕ್ತಿ ನೀಡಿದ್ದ ದೂರಿನ ಮೇರೆಗೆ ಪೊಲೀಸರ ತಂಡ ಸೋಮವಾರ ಸಂಜೆ ಕೇರಳ ಹೌಸ್ ಕ್ಯಾಂಟೀನಿನ ಮೇಲೆ ದಾಳಿ ನಡೆಸಿತ್ತು.

ಈ ದಾಳಿಯನ್ನು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರು ಖಂಡಿಸಿದ್ದರು. ಅಲ್ಲದೆ, ದಾಳಿ ನಡೆಯುವ ಮುನ್ನ ಅಧಿಕಾರಿಗಳು ಒಮ್ಮೆ ಯೋಚಿಸಬೇಕಿತ್ತು, ಕೇರಳ ಹೌಸ್ ಎಂಬುದು ರಾಜ್ಯದ ಅತಿಥಿ ಗೃಹವೇನೂ ಅಲ್ಲ. ಕ್ಯಾಂಟೀನ್ ನಲ್ಲಿ ಕಾನೂನಿನ ಪ್ರಕಾರವೇ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ಕಾನೂನಿ ಪ್ರಕಾರದಲ್ಲೇ ಸಸ್ಯಾಹಾರ ಹಾಗೂ ಮಾಂಸಾಹಾರಗಳನ್ನು ನೀಡಲಾಗುತ್ತಿದೆ. ಕ್ಯಾಂಟೀನ್ ಮೆನುವಿನಲ್ಲೂ ಕಾನೂನಿ ರೀತಿಯಲ್ಲೇ ಊಟದ ಎಲ್ಲಾ ಪದಾರ್ಥಗಳನ್ನು ಪಟ್ಟಿಯಾಗಿ ನೀಡಲಾಗಿದೆ. ಪ್ರಕರಣ ಕುರಿತಂತೆ ಕೇಂದ್ರ ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕಿದ್ದು, ಕ್ಯಾಂಟೀನ್ ಮೇಲೆ ದಾಳಿ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದರು.

ಈ ಪ್ರಕರಣ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಅಲ್ಲದೆ, ದೆಹಲಿ ಪೊಲೀಸರು ವರ್ತನೆ ಖಂಡಿಸಿ ಕೇರಳ ಸಂಸದರು ನಿನ್ನೆ ದೆಹಲಿಯಲ್ಲಿ ಪ್ರತಿಭಟನೆಗಿಳಿದಿದ್ದರು.

ಹೀಗಾಗಿ ಪ್ರಕರಣ ಸಂಬಂಧ ಕರೆ ಮಾಡಿ ದೂರು ನೀಡಿದ್ದ ವಿಷ್ಣು ಗುಪ್ತ ವಿರುದ್ಧ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 182 (ತಪ್ಪು ದೂರು, ಉದ್ದೇಶ ಪೂರ್ವವಾಗಿ ತೊಂದರೆ ಹಾಗೂ ನೋವು) ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com