ಮುಂಬೈ: ಮಹರಾಷ್ಟ್ರದ ಪಿಡಬ್ಲ್ಯೂಡಿ ಸಚಿವ ಏಕನಾಥ್ ಶಿಂಧೆ ಸಲ್ಲಿಸಲು ಮುಂದಾದ ರಾಜಿನಾಮೆ ಪತ್ರವನ್ನು ಸ್ವೀಕರಿಸಲು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನಿರಾಕರಿಸಿದ್ದಾರೆ.
ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ನನ್ನ ಸಲಹೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಇಂದು ಸಾರ್ವಜನಿಕ ರ್ಯಾಲಿ ನಡೆಸಿ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆಗೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಉದ್ಧವ್ ಠಾಕ್ರೆ ರಾಜಿನಾಮೆ ಪತ್ರ ಸ್ವೀಕರಿಸಲು ನಿರಾಕರಿಸಿದ್ದಾರೆ.
ಫಡ್ನವೀಸ್ ಸರ್ಕಾರದ ವಿರುದ್ಧ ಗುಡುಗಿರುವ ಉದ್ಧವ್ ಠಾಕ್ರೆ, ರಾಜ್ಯ ಸರ್ಕಾರ ನಮ್ಮ ಮೇಲೆ ಸವಾರಿ ಮಾಡುತ್ತಿದೆ, ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೇ, ಬೆಂಬಲವನ್ನು ವಾಪಸ್ ಪಡೆಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಫಡ್ನವೀಸ್, ಶಿವಸೇನಾ ನಾಯಕರು ಕೇವಲ ಗಮನ ಸೆಳೆಯಲು ಈ ನಾಟಕವಾಡುತ್ತಿದ್ದಾರೆ ಎಂದಿದ್ದಾರೆ.