

ಗೌಹಾಟಿ: ಅಪ್ರಾಪ್ತ ಮನೆಗೆಲಸದ ಬಾಲಕಿಯನ್ನು ರೇಪ್ ಮಾಡಿರುವ ಆರೋಪ ಎದುರಿಸುತ್ತಿರುವ ಅಸ್ಸಾಮಿನ ಶಾಸಕ ತಲೆಮರೆಸಿಕೊಂಡಿದ್ದಾರೆ.
"ನಾವು ಅವರ ಕಚೇರಿ ಮತ್ತು ಗೌಹಾಟಿಯ ಖಾಸಗಿ ಮನೆಗಳಲ್ಲಿ ತಪಾಸಣೆ ನಡೆಸಿದ್ದೇವೆ. ಆದರೆ ಅವರು ಪತ್ತೆಯಾಗಿಲ್ಲ. ಬಂಧನವನ್ನು ತಪ್ಪಿಸಲು ಅವರು ತಪ್ಪಿಸಿಕೊಂಡಿದ್ದಾರೆ ಎಂದೆನಿಸುತ್ತಿದೆ" ಎಂದು ಕಮ್ರೂಪ್ ಪೊಲೀಸ್ ಆಯುಕ್ತ ಇಂದ್ರಾಣಿ ಬರುಚ್ ತಿಳಿಸಿದ್ದಾರೆ.
ಕಳೆದ ಭಾನುವಾರ ರಾತ್ರಿ ೧೪ ವರ್ಷದ ಬಾಲಕಿ ಮತ್ತು ಅವರ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಶಾಸಕ ಗೋಪಿನಾಥ್ ದಾಸ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಈಮಧ್ಯೆ ಶಾಸಕನ್ನು ಬಂಧಿಸಲು ವಿಫಲರಾಗಿರುವುದಕ್ಕೆ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಪೊಲೀಸರನ್ನು ಟೀಕಿಸಿದೆ.
ಗೌಹಾಟಿಯಿಂದ ೪೫ ಕಿಮೀ ದೂರದಲ್ಲಿರುವ ಬೋಕೋ ಕ್ಷೇತ್ರವನ್ನು ಗೋಪಿನಾಥ್ ದಾಸ್ ಪ್ರತಿನಿಧಿಸುತ್ತಾರೆ.