

ನವದೆಹಲಿ: ಸೌದಿ ಅರೇಬಿಯಾದ ಸಮ್ತಾ ಸಾರ್ವಜನಿಕ ಆಸ್ಪತ್ರೆ ಮೇಲೆ ಯೆಮೆನಿಯರು ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯ ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಕೇರಳ ಮೂಲದ ಮ್ಯೆಕಾನಿಕ್ ಫಾರೂಖ್ ಮೃತ ದುರ್ದೈವಿ. ಇನ್ನು ಬಿಹಾರದ ಮೊಹಮದ್ ಸಿದಿಕಿ ಮತ್ತು ಕೇರಳದ ಸನ್ನಿ ಥಾಮಸ್ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಮುಂಜಾನೆ ಸಮ್ತಾ ಸರ್ಕಾರಿ ಅಸ್ಪತ್ರೆ ಮೇಲೆ ಬಂಡುಕೋರರು ದಾಳಿ ನಡೆಸಿದ ಪರಿಣಾಮ ಭಾರತದ ಪ್ರಜೆಯೊಬ್ಬ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.