ಹೊಸ ವರ್ಷಕ್ಕೆ ಹೊಸ ಗಣಿ ನೀತಿ

ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಮಾಫಿಯಾರಾಜ್ ಹತ್ತಿಕ್ಕುವ ಸಲುವಾಗಿ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ...
ಪ್ರಕಾಶ್ ಜಾವಡೇಕರ್ (ಕೃಪೆ: ರಾಯಿಟರ್ಸ್ )
ಪ್ರಕಾಶ್ ಜಾವಡೇಕರ್ (ಕೃಪೆ: ರಾಯಿಟರ್ಸ್ )
Updated on: 
ನವದೆಹಲಿ: ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಮಾಫಿಯಾರಾಜ್ ಹತ್ತಿಕ್ಕುವ ಸಲುವಾಗಿ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಮೊದಲ ಕರಡು ನೀತಿ ಹೊರತಂದಿದೆ. ಇದರಲ್ಲಿ ಮರಳು ಮಾಫಿಯಾ ಮತ್ತು ಇನ್ನಿತರೆ ಅದಿರುಗಳ ಲೂಟಿ ತಡೆಯಲು ಉಪಗ್ರಹ ಕಣ್ಗಾವಲೂ ಸೇರಿದಂತೆ ಹಲವು ಉನ್ನತ
ತಂತ್ರಜ್ಞಾನ ಅಳವಡಿಸುವ ಬಗ್ಗೆ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಸಾರ್ವಜನಿಕ ಅಭಿಪ್ರಾಯ ಮತ್ತು ಸಲಹೆಗಳನ್ನು ಪರಿಗಣಿಸಿ, 2016ರ ಜ.1ರಂದು ಈ ನೂತನ
ಗಣಿ ನೀತಿ ಜಾರಿಗೆ ತರಲಾಗುವುದು ಎಂದಿದ್ದಾರೆ. ಉನ್ನತ ತಂತ್ರಜ್ಞಾನದ ಜೊತೆಗೆ ತೀವ್ರ ಭದ್ರತಾ ವ್ಯವಸ್ಥೆಗಳನ್ನೂ ರೂಪಿಸಲಾಗಿದ್ದು, ವಿಕೇಂದ್ರೀಕೃತ ನಿರ್ಧಾರಗಳ ಮೂಲಕ ಮರಳು ಮತ್ತಿತರ ಅಕ್ರಮ ಗಣಿಗಾರಿಕೆ ಯನ್ನು ತಡೆಗಟ್ಟಿ ದೇಶದ ನದಿಗಳನ್ನು ಉಳಿಸಲು ಹೊಸ ನೀತಿ ಪೂರಕವಾಗಲಿದೆ. ಅಕ್ರಮ ಗಣಿಗಾರಿಕೆಯಿಂದ ಲೂಟಿ, ಮಾಫಿಯಾ ಜೊತೆಗೆ ಹಲವು ಹತ್ಯೆಗಳೂ ನಡೆದಿರು ವುದನ್ನುಉಲ್ಲೇಖಿಸಿದ ಸಚಿವರು, ಅವೆಲ್ಲದಕ್ಕೂ ನೂತನ ನೀತಿ ಇತಿಶ್ರೀ ಹಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‍ನ 2012ರ ಆದೇಶದ ಅನ್ವಯ, ಒಂದುಹೆಕ್ಟೇರ್ ಜಾಗದಲ್ಲಿ ಗಣಿಗಾರಿಕೆ ಮಾಡುವುದಾದರೂ ಪರಿಸರ ಇಲಾಖೆಯ ಅನುಮತಿ ಪಡೆಯುವುದು ಅವಶ್ಯ. ಹೊಸ ನೀತಿಯ ಪ್ರಕಾರ, 5 ಹೆಕ್ಟೇರ್‍ವರೆಗೂ ಜಿಲ್ಲೆಗಳ ಪರಿಸರ ಇಲಾಖೆಯೇ ಅನುಮತಿ ನೀಡಬಹುದಾಗಿದ್ದು, 50 ಹೆಕ್ಟೇರ್‍ಗಿಂತ ಕಮ್ಮಿ ಇದ್ದಲ್ಲಿ ರಾಜ್ಯ ಹಾಗೂ ಹೆಚ್ಚಿದ್ದಲ್ಲಿ ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ
ಕರಡು ನೀತಿಯ ಮುಖ್ಯಾಂಶಗಳು
-ಬರಲಿವೆ ಉಪಗ್ರಹ ಕಣ್ಗಾವಲು ಹಾಗೂ ತೀವ್ರ ಭದ್ರತಾ ವ್ಯವಸ್ಥೆಗಳು 
-ವಿಕೇಂದ್ರೀಕೃತ ನಿರ್ಧಾರಗಳ ಮೂಲಕ ಮರಳು ಮಾಫಿಯಾ ಗಣಿಗಾರಿಕೆಗೆ ಕಡಿವಾಣ
- ದೇಶದ ನದಿಗಳ ಸಂರಕ್ಷಣೆಗಾಗಿವಿಶೇಷ ನಿಯಮಾವಳಿ
- ನೀತಿಗೊಳಪಡಲಿರುವ ಮಣ್ಣು, ಮರಳು, ಮಾರ್ಬಲ್, ಗ್ರಾನೈಟ್ ಹಾಗೂ ಇನ್ನಿತರ ಖನಿಜ ಗಣಿಗಾರಿಕೆ
- ಕರಡು ನೀತಿಗೆ 60ದಿನಗಳ ಸಮಯಾವಕಾಶ.ಜನಾಭಿಪ್ರಾಯ -ಸಲಹೆ ಪಡೆದು ಜ.1ಕ್ಕೆ ಜಾರಿ
- ನೂತನ ನೀತಿಯಿಂದ ಅಕ್ರಮ ಗಣಿಗಾರಿಕೆ, ಕಾಳಸಂತೆಗೆ ತಡೆ.
-ರಾಜ್ಯಗಳ ಆದಾಯದಲ್ಲಿ ಹೆಚ್ಚಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com