ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪ್ರತ್ಯೇಕತಾವಾದಿ, ಉಗ್ರ ಸಂಘಟನೆ ಗುಂಪುಗಳ ಮಧ್ಯೆ ಉಂಟಾಗಿದ್ದ ಘರ್ಷಣೆಯಿಂದಾಗಿ ಕಣಿವೆ ರಾಜ್ಯದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಭಾನುವಾರವೂ ಮುಂದುವರೆದಿದೆ.
ಶುಕ್ರವಾರ ಈದ್ ಪ್ರಾರ್ಥನೆಯ ಬಳಿಕ ಗುಂಪು ಘರ್ಷಣೆ ಉಂಟಾಗಿ ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಸಿಡಿಸಿದ್ದರು. ಜತೆಗೆ, ಪ್ರತ್ಯೇಕತಾವಾದಿ ಹಾಗೂ ಹುರಿಯತ್ ಸಂಘಟನೆಯ ಮುಖಂಡರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಸಾಮಾಜಿಕ ಜಾಲ ತಾಣಗಳ ಮೂಲಕ ಪರಿಸ್ಥಿತಿಯ ದುರುಪಯೋಗ ಆಗುವುದನ್ನು ತಡೆಯಲು ಸರ್ಕಾರ ಇಂಟರ್ ನೆಟ್ ಸೇವೆಯನ್ನು ರಾಜ್ಯದಾದ್ಯಂತ ಸ್ಥಗಿತಗೊಸಿತ್ತು.
ಇಂಟರ್ ನೆಟ್ ಸ್ಥಗಿತಗೊಳಿಸಿರುವುದನ್ನು ಶನಿವಾರ ರಾತ್ರಿಯಿಂದ ಮತ್ತೆ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.