

ತ್ರಿಶೂರ್: ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಕೃತಿಯ ಮಲಯಾಳಂ ಆವೃತ್ತಿ ಬಿಡುಗಡೆ ವೇಳೆ ಉಂಟಾದ ಗದ್ದಲದಿಂದ ಕಾರ್ಯಕ್ರಮವೇ ರದ್ದಾದ ಘಟನೆ ಕೇರಳದಲ್ಲಿ ಶನಿವಾರ ನಡೆದಿದೆ.
ಇದಕ್ಕೆ ಕಾರಣ ಲಿಂಗ ತಾರತಮ್ಯ. ಕಲಾಂರ ಕೃತಿಯನ್ನು ಭಾಷಾಂತರ ಮಾಡಿದ್ದ ಶ್ರೀದೇವಿ ಎಸ್ ಕರ್ತಾ ಅವರಿಗೆ ವೇದಿಕೆಯೇರಲು ನಿಷೇಧ ಹೇರಿದ್ದೇ ಗದ್ದಲಕ್ಕೆ ಕಾರಣ.
ಕಾರ್ಯಕ್ರಮಕ್ಕೆ ಆಗಮಿಸಿದ ಸ್ವಾಮೀಜಿಗೆ ಯುವತಿ ಜತೆ ವೇತದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲವೆಂದು ಸಂಘಕರು ಆಕೆಗೆ ನಿಷೇಧ ಹೇರಿದ್ದರು. ಇಧನ್ನು ಆಖೆ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಈ ಹಿನ್ನಲೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಕೆಲ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದ ಕಾರಣ ಕಾರ್ಯಕ್ರಮವನ್ನೇ ರದ್ದುಮಾಡಲಾಯಿತು.