ಮಣಿಪುರ ರಾಜ್ಯಪಾಲ ಸಯ್ಯದ್ ಅಹ್ಮದ್ ನಿಧನ

ಮಣಿಪುರ ರಾಜ್ಯಪಾಲ ಸಯ್ಯದ್ ಅಹ್ಮದ್ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ.
ಸಯ್ಯದ್ ಅಹ್ಮದ್
ಸಯ್ಯದ್ ಅಹ್ಮದ್
Updated on: 
ಮುಂಬೈ: ಮಣಿಪುರ ರಾಜ್ಯಪಾಲ ಸಯ್ಯದ್ ಅಹ್ಮದ್ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ. 
ಸಯ್ಯದ್ ಅಹ್ಮದ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕಳೆದ ವಾರ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.
73 ವರ್ಷದ  ಸಯ್ಯದ್ ಅಹ್ಮದ್ ಅವರು ಮಡದಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
ಮಣಿಪುರದ ರಾಜ್ಯಪಾಲರಾಗಿ 2015ರ ಮೇ 16ರಂದು ಪದಗ್ರಹಣ ಮಾಡಿದ್ದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಯ್ಯದ್ ಅಹ್ಮದ್ ರನ್ನು ಜಾರ್ಖಂಡ್ ನ ರಾಜ್ಯಪಾಲರನ್ನಾಗಿ 2011ರಲ್ಲಿ ನೇಮಿಸಲಾಗಿತ್ತು. ಬಳಿಕ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅವರನ್ನು ಜಾರ್ಖಂಡ್ ನಿಂದ ಮಣಿಪುರಕ್ಕೆ ವರ್ಗಾಹಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com