ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ತಳ್ಳಿದ ಟಿಸಿ: ಮಹಿಳೆ ಸಾವು

ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ಟಿಕೆಟ್ ಚೆಕ್ಕರ್(ಟಿಸಿ) ತಳ್ಳಿದ ಪರಿಣಾಮ, ಮಹಿಳೆ ರೈಲಿನಡಿಗೆ ಸಿಲುಕಿ ಸಾವನ್ನಪ್ಪಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಾಜಾಪುರ್: ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ಟಿಕೆಟ್ ಚೆಕ್ಕರ್(ಟಿಸಿ) ತಳ್ಳಿದ ಪರಿಣಾಮ, ಮಹಿಳೆ ರೈಲಿನಡಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆರ್ಚಾ ರೈಲ್ವೆ ನಿಲ್ಧಾಣದ ಬಳಿ ನಡೆದಿದೆ.

ಮಾಲ್ವಾ ಎಕ್ಸ್ ಪ್ರೆಸ್ ರೈಲಿನ ಸ್ಲೀಪರ್ ಕೋಚ್ ನಲ್ಲಿದ್ದ ಟಿಸಿ 55 ವರ್ಷದ ಮಹಿಳೆಯನ್ನು ತಳ್ಳಿದ್ದಾರೆ. ಈ ವೇಳೆ ಆಕೆ ರೈಲಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಓಂ ಕುಮಾರಿ ಟೆಮ್ರೆ ಮೃತ ಮಹಿಳೆ. ತನ್ನ ಮೂವರು ಮಕ್ಕಳೊಂದಿಗೆ ಸಂಬಂಧಿಕರ ಮನೆಯಿಂದ ಹಿಂದಿರುಗುತ್ತಿದ್ದರು. ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಸ್ಥಳವಿಲ್ಲದ ಕಾರಣ, ಎಸಿ ಕೋಚ್ ಗೆ ಬಂದಿದ್ದಾರೆ. ಇದರಿಂದ ಕೋಪಗೊಂಡ ಟಿಸಿ ಆಕೆಯನ್ನು ತಳ್ಳಿದ್ದಾರೆ ಎಂದು ಮಕ್ಕಳು ಆರೋಪಿಸಿದ್ದಾರೆ.

ಮೃತ ಮಹಿಳೆ ಮಕ್ಕಳಾದ ರವಿ ಮತ್ತು ಇಬ್ಬರು ಹೆಣ್ಣು ಮಕ್ಕಳಾದ ನೇಹಾ ಮತ್ತು ಶಾಲು ಟಿಸಿ ವಿರುದ್ಧ ದೂರು ದಾಖಲಿಸಿದ್ದಾರೆ. ನಮ್ಮನ್ನು ಸೇರಿ ಇತರೆ ಪ್ರಯಾಣಿಕರನ್ನು ಟಿಸಿ ಜೋರಾಗಿ ತಳ್ಳಿದ್ದಾರೆ. ಈ ವೇಳೆ ಆಯಾ ತಪ್ಪಿ ನಮ್ಮ ತಾಯಿ ರೈಲಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸ್ ಅಧಿಕಾರಿಗಳು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com