ಒಂದೇ ಹೆರಿಗೆಯಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಚತ್ತೀಸ್‌ಗಢದ ಸುರ್‌ಗುಜಾ ಜಿಲ್ಲೆಯ ಅಂಬಿಕಾಪುರ್ ಸಿವಿಲ್ ಹಾಸ್ಪಿಟಲ್‌ನಲ್ಲಿ 25ರ ಹರೆಯದ ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ 5 ಮಕ್ಕಳಿಗೆ ಜನ್ಮ....
ನವಜಾತ ಶಿಶುಗಳು
ನವಜಾತ ಶಿಶುಗಳು
Updated on
ರಾಯ್ಪುರ್:  ಚತ್ತೀಸ್‌ಗಢದ ಸುರ್‌ಗುಜಾ ಜಿಲ್ಲೆಯ ಅಂಬಿಕಾಪುರ್ ಸಿವಿಲ್ ಹಾಸ್ಪಿಟಲ್‌ನಲ್ಲಿ 25ರ ಹರೆಯದ ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಏಳು ತಿಂಗಳಲ್ಲೇ ಹೆರಿಗೆ ನಡೆದಿರುವ ಕಾರಣ ಎಲ್ಲ ಮಕ್ಕಳ ತೂಕ ಕಡಿಮೆ ಇದೆ. ದೇಹದ ತೂಕ ಕಡಿಮೆಯಿದ್ದರೂ ಮಕ್ಕಳು ಆರೋಗ್ಯದಿಂದಿದ್ದಾರೆ ಎಂದು ವೈದ್ಯರಾದ ಡಾ.ಕೆ. ಆರ್ ತೇಕಂ ಹೇಳಿದ್ದಾಕೆ. 
ಲಖನ್‌ಪುರ್ ಬ್ಲಾಕ್ ಗ್ರಾಮದ ನಿವಾಸಿಯಾಗಿರುವ ಮನಿತಾ ಎಂಬಾಕೆನ್ನು ಮಾರ್ಚ್ 31ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಕೆ ಶನಿವಾರ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಸೋನೋಗ್ರಫಿ ಮಾಡಿದಾಗ ಎರಡಕ್ಕಿಂತ ಹೆಚ್ಚು ಮಕ್ಕಳು ಗರ್ಭದಲ್ಲಿವೆ ಎಂದು ಹೇಳಿದ್ದರೂ ಐದು ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿರುವುದು ನನಗೂ ಅಚ್ಚರಿ ಮೂಡಿಸಿದೆ ಅಂತಾರೆ ಮನಿತಾ.
ಮನಿತಾ ಅವರ ಎರಡನೇ ಹೆರಿಗೆ ಇದಾಗಿದ್ದು, ಮೊದಲಿನ ಹೆರಿಗೆಯಲ್ಲಿ ಜನಿಸಿದ ಮಗು ಸಾವನ್ನಪ್ಪಿತ್ತು ಎಂದು ಮನಿತಾ ಅವರ ಸಂಬಂಧಿಯೊಬ್ಬರು ಹೇಳಿರುವುದಾಗಿ ಮಾಧ್ಯಮವೊಂದು ಉಲ್ಲೇಖಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com