ಅದೇ ವೇಳೆ ಫ್ಯಾನ್‌ನಿಂದ ಪ್ರತಿ ಗ್ರಾಹಕನಿಗೆ ವರ್ಷದಲ್ಲಿ ವಿದ್ಯುತ್ ಬಿಲ್ ನಲ್ಲಿ ರು. 700 ರಷ್ಟು ಉಳಿತಾಯವಾಗಲಿದೆ. ಅಷ್ಟೇ ಅಲ್ಲ, ಕೃಷಿ ಪಂಪ್‌ಗೆ ಸಿಮ್ ಆಧಾರಿತ ತಂತ್ರಜ್ಞಾನದ ಅನುಕೂಲ ಕಲ್ಪಿಸಲಾಗುತ್ತಿದ್ದು, ರೈತ ತನ್ನ ಮನೆಯಿಂದಲೇ ಮೊಬೈಲ್ ಫೋನ್ ಬಳಸಿಕೊಂಡು ಪಂಪ್‌ನ ಸ್ವಿಚ್‌ನ್ನು ಸ್ಟಾರ್ಟ್ ಮತ್ತು ಆಫ್ ಮಾಡಬಹುದಾಗಿದೆ.